ದೇಶಪ್ರಮುಖ ಸುದ್ದಿ

ಪ.ಬಂಗಾಳದಲ್ಲಿ ಆನೆ ದಂತಗಶ ವಶ

ಸಿಲಿಗುರಿ (ಡಿ.14): ಪಶ್ಚಿಮ ಬಂಗಾಳ ರಾಜ್ಯದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು 10.4 ಕೆ.ಜಿ ತೂಕದ 2 ಆನೆ ದಂತಗಳನ್ನು ವಶಕ್ಕೆ ಪಡೆದಿದ್ದಾರೆ. ದಂತ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಸಿಲಿಗುರಿ ಭಾಗದಲ್ಲಿ ನಿರಂತರವಾಗಿ ಆನೆಗಳ ದಂತಗಳನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತದೆ. ಪೊಲೀಸರು ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಹದ್ದಿನ ಕಣ್ಣು ಇರಿಸಿದ್ದಾರೆ. ಇಬ್ಬರು ವ್ಯಕ್ತಿ ಗಳ ಬಳಿ ದಂತ ಇರುವ ಕುರಿತಾಗಿ ಖಚಿತ ಮಾಹಿತಿ ಬಂದ ಕಾರಣ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. (ಎನ್.ಬಿ)

Leave a Reply

comments

Related Articles

error: