ಕ್ರೀಡೆ

ಎರಡನೇ ಟೆಸ್ಟ್: ಆಸೀಸ್ 326ಕ್ಕೆ ಆಲೌಟ್; ಭಾರತ ಊಟದ ವಿರಾಮಕ್ಕೆ 6/1

ಪರ್ತ್,ಡಿ.15-ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಆಸೀಸ್ 108.3 ಓವರ್ ಗಳಲ್ಲಿ 326 ರನ್ ಗಳಿಗೆ ಆಲೌಟ್ ಆಗಿದೆ.

ನಂತರ ಬ್ಯಾಟಿಂಗ್ ಗಿಳಿದ ಭಾರತ ಊಟದ ವಿರಾಮದ ವೇಳೆಗೆ 3 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 6 ರನ್ ಗಳಿಸಿದೆ. ಭಾರತಕ್ಕೆ ಮೊದಲ ಆಘಾತವಾಗಿ ಖಾತೆ ತೆರೆಯುವ ಮುನ್ನವೇ ಮುರಳಿ ವಿಜಯ್ ಪೆವಿಲಿಯನ್ ಸೇರಿದರು. ಮಿಚೆಲ್ ಸ್ಟಾರ್ಕ್, ಮುರಳಿ ವಿಜಯ್ ಅನ್ನು ಕ್ಲೀನ್ ಬೌಲ್ಡ್ ಮಾಡಿದರು.

ಈ ಮೊದಲು 277/6 ನಲ್ಲಿದ್ದ ಶನಿವಾರ ಆಟ ಆರಂಭಿಸಿದ ಆಸೀಸ್‌ಗೆ ನಾಯಕ ಟಿಮ್ ಪೈನ್ ಹಾಗೂ ಪ್ಯಾಟ್ ಕಮ್ಮಿನ್ಸ್ ಉತ್ತರ ಆರಂಭವೊದಗಿಸಿದರು. ಇವರಿಬ್ಬರು ಏಳನೇ ವಿಕೆಟ್‌ಗೆ 49 ರನ್‌ಗಳ ಮಹತ್ವದ ಜತೆಯಾಟ ನೀಡಿದರು.

ಈ ಹಂತದಲ್ಲಿ ಉಮೇಶ್ ದಾಳಿಯಲ್ಲಿ 19 ರನ್ ಗಳಿಸಿದ ಕಮಿನ್ಸ್ ಕ್ಲೀನ್ ಬೌಲ್ಡ್ ಆದರು. ಇದಾದ ಬೆನ್ನಲ್ಲೇ ಸೆಟ್ ಬ್ಯಾಟ್ಸ್‌ಮನ್ ನಾಯಕ ಟಿಮ್ ಪೈನ್‌ರನ್ನು (38) ಬುಮ್ರಾ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು.

ಮಿಚೆಲ್ ಸ್ಟಾರ್ಕ್ (6) ಹಾಗೂ ಜೋಶ್ ಹೇಜಲ್‌ವುಡ್ (0) ಬೆನ್ನು ಬೆನ್ನಿಗೆ ಹೊರದಬ್ಬಿದ ಇಶಾಂತ್ ಆಸೀಸ್ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡಿದರು. ಅಂತಿಮವಾಗಿ ಆಸೀಸ್ 108.3 ಓವರ್‌ಗಳಲ್ಲಿ 326 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ನಥನ್ ಲಯನ್ 9 ರನ್ ಗಳಿಸಿ ಅಜೇಯರಾಗುಳಿದರು.

ಭಾರತದ ಪರ ಇಶಾಂತ್ ಶರ್ಮಾ ನಾಲ್ಕು (41/4) ಮತ್ತು ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಹನುಮ ವಿಹಾರಿ ತಲಾ ಎರಡು ವಿಕೆಟುಗಳನ್ನು ಹಂಚಿಕೊಂಡರು.

ಆಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 31 ರನ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. (ಎಂ.ಎನ್)

 

 

Leave a Reply

comments

Related Articles

error: