ಮೈಸೂರು

ವಿಷಯುಕ್ತ ಪ್ರಸಾದ ದುರಂತ ಪ್ರಕರಣ : ನಾಲ್ವರು ಮೈಸೂರಿಗೆ ಶಿಫ್ಟ್; ಅಜ್ಞಾತ ಸ್ಥಳದಲ್ಲಿ ಶಂಕಿತರ ವಿಚಾರಣೆ

ರಾಜ್ಯ(ಚಾಮರಾಜನಗರ)ಡಿ.15:- ವಿಷಯುಕ್ತ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರನ್ನು ಮೈಸೂರಿಗೆ ಶಿಫ್ಟ್ ಮಾಡಲಾಗಿದೆ.

ಅಸ್ವಸ್ಥರಾಗಿದ್ದ ಮಲ್ಲಿಕಾ, ಶ್ರೀನಿವಾಸ್ ಸೇರಿದಂತೆ ನಾಲ್ವರನ್ನು ಮೈಸೂರಿಗೆ ಕಳುಹಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ತೋಮಿಯಾರ್ ಪಾಳ್ಯದ ರಾಚಯ್ಯ(65) ಎಂಜಿ.ದೊಡ್ಡಿಯ ಪಾಪಣ್ಣ(50),  ವಡ್ಡರ ದೊಡ್ಡಿಯ ಶಕ್ತಿವೇಲು (19) ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.

ಪೂಜಾರಿ ಮಹದೇವನನ್ನು ಹೆಚ್ಚಿನ ವಿಚಾರಣೆಗೆ ರಾಮಾಪುರ ಪೊಲೀಸರು ವಶಕ್ಕೆಪಡದಿದ್ದಾರೆ. ಇದೀಗ ಪೊಲೀಸ್ ವಶದಲ್ಲಿರುವವರ ಸಂಖ್ಯೆ ಮೂರಕ್ಕೇರಿದೆ ಚಿನ್ನಪ್ಪಿ, ಮಾದೇಶ, ಮಹದೇವ ಪೊಲೀಸರ ವಶದಲ್ಲಿದ್ದು,ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: