ಪ್ರಮುಖ ಸುದ್ದಿಮೈಸೂರು

ಡಿ.17,18ರಂದು ನಂಜರಾಜ ಬಹದ್ದೂರ್ ಎಜುಕೇಷನ್ ಛಾರಿಟಿ ಫಂಡ್ ಬೋರ್ಡಿಂಗ್ ಹೋಂ ನ ಶತಮಾನೋತ್ಸವ

ಮೈಸೂರು,ಡಿ.15 : ನಂಜರಾಜ ಬಹದ್ದೂರ್ ಎಜುಕೇಷನ್ ಛಾರಿಟಿ ಫಂಡ್ ಬೋರ್ಡಿಂಗ್ ಹೋಂ, ಶ್ರೀ ರಾಮಸೇನಾ ಅರಸು ಮಂಡಳಿಯ ಶತಮಾನೋತ್ಸವ ಸಂಭ್ರಮವನ್ನು ಡಿ.17 ಮತ್ತು 18ರಂದು ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷ ಲಕ್ಷ್ಮೀಕಾಂತರಾಜೇ ಅರಸ್ ಅವರು ವಿವರ ನೀಡಿ, 12-09-1918ರಂದು ಸ್ಥಾಪನೆಯಾದ ಈ ಸಂಸ್ಥೆಗೆ ಈಗ ಶತಮಾನದ ಸಂಭ್ರಮ, ಡಿ.17ರ ಬೆಳಗ್ಗೆ 11 ಗಂಟೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟಿಸಲಿದ್ದು ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಮಳವಳ್ಳಿ ತಾಲ್ಲೂಕಿನ ಮಂಟೇಸ್ವಾಮಿ ಮಠದ ಶ್ರೀ ವರ್ಚಸ್ವಿ ಸಿದ್ದಲಿಂಗರಾಜೇ ಅರಸ್ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಬಿ.ಎನ್.ಬಹದ್ದೂರ್, ರಾಣಿ ದಾಕ್ಷಾಯಣಿ ಬಹದ್ದೂರ್ ಇರುವರು. ಶ್ರೀರಾಮ ಸೇವಾ ಅರಸು ಮಂಡಳಿ ಅಧ್ಯಕ್ಷ ಲಕ್ಷ್ಮೀಕಾಂತ್ ರಾಜೇ ಅರಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಡಿ.17ರಂದು ಬೆಳಗ್ಗೆ 10 ರಿಂದ ಪೈವ್ ಲೈಟ್ ವೃತ್ತದಿಂದ ಮೆರವಣಿಗೆ, ವರ್ಚಸ್ವಿ ಸಿದ್ದಲಿಂಗರಾಜೇ ಅರಸ್ ಸ್ಮರಣ ಸಂಚಿಕೆ ಬಿಡುಗಡೆ, ಲಿಂಗಾಜಮ್ಮಣ್ಣಿ ಅವರ ಪ್ರತಿಮೆ ಅನಾವರಣಗೊಳಿಸಲಾಗುವುದು ಎಂದು ಹೇಳಿದರು.

ದಿ.18 ಶತಮಾನೋತ್ಸವದ ಸಮಾರೋಪ ಸಮಾರಂಭ ಮಧ್ಯಾಹ್ನ 3 ಗಂಟೆಗೆ ಮಂಟೇಸ್ವಾಮಿ ಮಠದ ಧರ್ಮಾಧಿಕಾರಿ ಶ್ರೀ ಪ್ರಭುದೇವರಾಜೇ ಅರಸ್ ಸಾನಿಧ್ಯ ವಹಿಸಲಿದ್ದಾರೆ. ಹಲವಾರು ಗಣ್ಯರು ಹಾಜರಿರಲಿದ್ದಾರೆ ಎಂದು ತಿಳಿಸಿದರು.

ಕಾರ್ಯದರ್ಶಿ ಪ್ರತಾಪ್, ಉಪಾಧ್ಯಕ್ಷ ರಘುರಾಜೇ ಅರಸ್, ಸಹಕಾರ್ಯದರ್ಶಿ ನಂದೀಶ್ ಜಿ.ಅರಸ್ ಗೋಷ್ಠಿಯಲ್ಲಿ ಇದ್ದರು. (ವರದಿ :ಕೆ.ಎಂ.ಆರ್)

Leave a Reply

comments

Related Articles

error: