ಪ್ರಮುಖ ಸುದ್ದಿ

ಸಮಾಜವನ್ನು ಮಾದಕವಸ್ತು ಮುಕ್ತ ಸಮಾಜವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಆ್ಯಂಟಿ ಡ್ರಗ್ಸ್ ವಾಕಥಾನ್’ಗೆ ಚಾಲನೆ

ರಾಜ್ಯ(ಬೆಂಗಳೂರು) ಡಿ 15:- ಸಮಾಜವನ್ನು ಮಾದಕವಸ್ತು ಮುಕ್ತ ಸಮಾಜವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯೋಜಿಸಿದ್ದ  ಆ್ಯಂಟಿ ಡ್ರಗ್ಸ್ ವಾಕಥಾನ್’ಗೆ ಧರ್ಮಸ್ಥಳದ ಡಾ.ಡಿ.ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.

ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಾಲ್ಕು ತಿಂಗಳ ಈ ವಾಕಥಾನ್‌ಗೆ ಚಾಲನೆ ನೀಡಲಾಯಿತು. ನಮ್ಮ ಸಮಾಜವನ್ನು ಮಾದಕವಸ್ತು ಮುಕ್ತ ಸಮಾಜವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಮೊದಲ ಸರಣಿಯ ಹಗ್ಸ್-ನೋ-ಡ್ರಗ್ಸ್ ಕ್ಯಾಂಪೇನ್‌ನಲ್ಲಿ 50 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹೆಲ್ಪಿಂಗ್ ಹಾರ್ಟ್ಸ್ 35 ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ಏರ್ಪಡಿಸಿತ್ತು. ಪೋಷಕಾಂಶ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಮಹಿಳಾ ಸಬಲೀಕರಣ, ಮಕ್ಕಳ ಆರೈಕೆ, ವೃದ್ಧರ ಆರೈಕೆ ಮುಂತಾದ ಕ್ಷೇತ್ರಗಳಲ್ಲಿ ಸೌಲಭ್ಯ ವಂಚಿತ ದುರ್ಬಲವರ್ಗದವರಿಗೆ ಸಾಧ್ಯವಾಗುವಷ್ಟು ಬೆಂಬಲ ನೀಡುವ ಉದ್ದೇಶ ಹೊಂದಿದೆ. ಮಾದಕ ಡ್ರಗ್ಸ್ ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಈ ಅಭಿಯಾನ, ಈ ಮಾದಕ ವಸ್ತುಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವತ್ತ ಗಮನ ಹರಿಸಲಿದೆ.

ಜ್ಯೋತಿ ಮೂರ್ತಿ ನೇತೃತ್ವದ ಹೆಲ್ಪಿಂಗ್ ಹಾರ್ಟ್ ನಡೆಯುತ್ತಿದ್ದು, ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಮತ್ತು ಬಡ ವರ್ಗದ ಜನರಿಗೆ ನೈತಿಕ ಮತ್ತು ಹಣಕಾಸು ನೆರವು ನೀಡುವ ಮೂಲಕ ಅವರನ್ನು ಸಬಲೀಕರಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಶಂಸಿದರಲ್ಲದೇ, ಇಂತಹ ಅಭಿಯಾನದಿಂದ ಮಕ್ಕಳಿಗೆ ಅರಿವು ಮೂಡಿಸಿ ಮಾದಕ ವಸ್ತುಗಳಿಂದ ದೂರವಿಡಬಹುದು ಎಂದರು.

2018 ರ ಆಗಸ್ಟ್ 10 ರಿಂದ ಡಿಸೆಂಬರ್ 15ರವರೆಗೆ ನಗರದಾದ್ಯಂತ ನಾವು ಮಾದಕ ವಸ್ತು ನಿರ್ಮೂಲನೆ ಕುರಿತಾದ ಹಲವಾರು ಜಾಗೃತಿ ಅಭಿಯಾನಗಳನ್ನು ಆಯೋಜಿಸಿದ್ದೇವೆ. ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಅಭಿಯಾನಗಳನ್ನು ಕೈಗೊಂಡಿದ್ದೇವೆ. ಸುಂದರಿ ಗಾಂಧಿ ನೇತೃತ್ವದ ಮಾನಸಿಕ ತಜ್ಞರಾದ ಬಿಎಸ್ ರಜನಿ, ಅದಿತಿ ಸೇರಿದಂತೆ ಹಲವರು ಈ ಜಾಗೃತಿ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ ಎಂದು ಶಾಸಕ ಅಶ್ವತ್ಥನಾರಾಯಣ ಅವರು ತಿಳಿಸಿದರು.

 

ಮಾದಕವಸ್ತು ಮತ್ತು ಮದ್ಯಪಾನದ ಬಳಕೆ ಇಂದು ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿದ್ದು, ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಲ್ಪಿಂಗ್ ಹಾರ್ಟ್ಸ್ ಯುವ ಪೀಳಿಗೆಯನ್ನು ಇಂತಹ ಅನಿಷ್ಟ ಚಟಗಳಿಂದ ದೂರವಿರುವಂತೆ ಮಾಡುವ ನಿಟ್ಟಿನಲ್ಲಿ ಈ ಅಭಿಯಾನಗಳನ್ನು ಕೈಗೊಳ್ಳುತ್ತಿದೆ ಎಂದು ಆಯುಕ್ತ ಸುನೀಲ್ ಕುಮಾರ್ ಹೇಳಿದರು.

ಆರ್‌ಬಿಐನ ಮಾಜಿ ಉಪಗೌರ್ನರ್ ಆರ್.ಗಾಂಧಿ, ಕಾರ್ಪೊರೇಟ್ ಸಲಹೆಗಾರ ಅನಂತರವಿ, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರ್  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: