ಮೈಸೂರು

ಡಿ ಫಾರ್ಮ ಪದವೀಧರರಿಗೆ ಅನ್ಯಾಯ ಮಾಡದಿರಲು ಒತ್ತಾಯ

ಔಷಧಿ ಅಂಗಡಿಗಳಲ್ಲಿ ಕಾರ್ಯನಿರ್ವಹಿಸಿ 6 ತಿಂಗಳ ಬ್ರಿಡ್ಜ್ ಕೋರ್ಸ್‌ ಮುಗಿಸಿದವರನ್ನು ಫಾರ್ಮಸಿಸ್ಟ್‌ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಕರ್ನಾಟಕ ರಿಜಿಸ್ಟರ್ಡ್‌ ಫಾರ್ಮಸಿಸ್ಟ್‌ ಅಸೋಸಿಯೇಷನ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ರಿಜಿಸ್ಟರ್ಡ್‌ ಫಾರ್ಮಸಿಸ್ಟ್‌ ಅಸೋಸಿಯೇಷನ್‌ ಕಾರ್ಯಕರ್ತರು, ಸರ್ಕಾರ ಬ್ರಿಡ್ಜ್ ಕೋರ್ಸ್ ನಡೆಸಿದವರನ್ನು ಫಾರ್ಮಾಸಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು. ಮೆಡಿಕಲ್ ಶಾಪ್’ಗಳಲ್ಲಿ ನುರಿತ ಫಾರ್ಮಸಿಸ್ಟ್‌ಗಳ ಕೊರತೆ ಇದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಇತರೆ ಪದವಿ ಪಡೆದವರು ಉದ್ಯೋಗಕ್ಕಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. 6 ವರ್ಷ ಅನುಭವ ಹೊಂದಿದವರಿಗೆ ಬ್ರಿಡ್ಜ್ ಕೋರ್ಸ್‌’ಗೆ ಪ್ರವೇಶ ನೀಡಲಾಗುತ್ತಿದೆ. ಕೋರ್ಸ್‌ ಮುಗಿಸಿದವರನ್ನು ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ‘ಡಿ ಫಾರ್ಮ’ ಪದವೀಧರರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಡಿ.ಕೌಶಿಕ್‌, ಕಾರ್ಯದರ್ಶಿ ಸಂಜೀವಕುಮಾರ್‌, ಖಜಾಂಚಿ ಶಿವಪ್ರಸಾದ್‌, ಗೌರವ್‌ ಸೇರಿದಂತೆ ಇತರರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ  ಈ ಕುರಿತು ಅಧಿಕಾರಿಗೆ ಮನವಿ ಸಲ್ಲಿಸಿದರು.

Leave a Reply

comments

Related Articles

error: