ಮೈಸೂರು

ಮೈಸೂರಲ್ಲಿ ವೈಕುಂಠ ಏಕಾದಶಿ ಆಚರಣೆ : ದೇವಾಲಯಗಳಲ್ಲಿ ವಿಶೇಷ ಪೂಜೆ

1ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ. ಅಂದು ಮೋಕ್ಷಪ್ರಾಪ್ತಿಯಾದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ ಎನ್ನುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪ್ರಯುಕ್ತ ಮೈಸೂರಿನಲ್ಲಿ ವೆಂಕಟರಮಣ, ವೆಂಕಟಾಚಲಪತಿ  ದೇವಸ್ಥಾನ ಹಾಗೂ ಸಚ್ಚಿದಾನಂದ ಗಣಪತಿ ಆಶ್ರಮಗಳಲ್ಲಿ ವೈಕುಂಠ ಏಕಾದಶಿಯಂದು ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

2ಮೈಸೂರಿನ ಪ್ರಮುಖ ದೇವಸ್ಥಾನಗಳಿಗೆ ಭಕ್ತಾದಿಗಳು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಶ್ರೀಮನ್ನಾರಾಯಣನೇ ಧರೆಗಿಳಿದು ಬಂದಂತಹ ಅನುಭವವನ್ನು ಭಕ್ತರು ಪಡೆದರು. ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ದೇವರನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ದೇವಾಲಯಗಳಲ್ಲಿ ಶ್ರೀಮನ್ನಾರಾಯಣನ ಭಕ್ತಿಪ್ರಧಾನ ಗೀತೆಗಳು, ಮಂತ್ರಘೋಷಗಳು ಕೇಳಿಬರುತ್ತಿವೆ.

ಏತನ್ಮಧ್ಯೆ ಒಂಟಿಕೊಪ್ಪಲಿನ ವೆಂಕಟಾಚಲಪತಿ ದೇವಳದಲ್ಲಿ ಆಡಳಿತ ಮಂಡಳಿಯವರ ಒಳಜಗಳಗಳಿಂದ  ದೇವರಿಗೆ ಅಲಂಕಾರ ಮಾಡದೇ ಭಕ್ತರಿಗೆ ನಿರಾಸೆ ಮಾಡಿದ ಘಟನೆಯೂ ನಡೆದಿದೆ.

ನಗರಪಾಲಿಕೆ ಮಾಜಿ ಸದಸ್ಯರೋರ್ವರು ಭಕ್ತರನ್ನು ಅವಾಚ್ಯ ಶಬ್ದಗಳಿಂದ ಬೈದು ಕಳಿಸಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಟ್ರಸ್ಟಿ ಮೋಹನ್ ಕುಮಾರ್, ದೇವಸ್ಥಾನವು ಪರಕಾಲ ಮಠದ ಪಂಚಾಂಗವನ್ನು ಅನುಸರಿಸಲಿದ್ದು, ಅದರ ಪ್ರಕಾರ ಜನವರಿ 9ರಂದು ವೈಕುಂಠ ಏಕಾದಶಿ ನಡೆಯಲಿದೆ. ನಾಳೆ ಅಂದರೆ ಜ.9ರಂದು ದೇವರಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಭಕ್ತರಿಗೆ ಈ ದಿನವೂ ದೇವರ ದರ್ಶನ ಮಾಡಲು ಅವಕಾಶ ನೀಡಲಾಗುವುದು. ನಿರಾಸೆ ಮಾಡುವುದಿಲ್ಲ  ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

comments

Related Articles

error: