ಸುದ್ದಿ ಸಂಕ್ಷಿಪ್ತ

ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಭಿನಂದನೆ ನಾಳೆ

ಮೈಸೂರು,ಡಿ.15 : ಮಹಾರಾಜ ಎಜುಕೇಷನ್ ಟ್ರಸ್ಟ್ ವತಿಯಿಂದ ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅವರ ಅಭಿನಂದನಾ ಸಮಾರಂಭವನ್ನು ಡಿ.16ರ ಬೆಳಗ್ಗೆ 11 ಗಂಟೆಗೆ ರಾಮಾನು ರಸ್ತೆಯ ರಾಜೇಂದ್ರ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ.

ರಾಮಕೃಷ್ಣ ಆಶ್ರಮದ ಡಾ.ಶಾಂತಿವೃತಾನಂದಜೀ ಮಹಾರಾಜ್ ಸಾನಿಧ್ಯ ವಹಿಸಲಿದ್ದಾರೆ. ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ ಅವರಿಂದ ಅಭಿನಂದನಾ ಭಾಷಣ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಸ್.ಮುರಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗುಲ್ಬರ್ಗ ವಿವಿಯ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಶಿಶುವಿಹಾರ ಸಂಸ್ಥೆ ಡಾ.ಎ.ಎಸ್.ಚಂದ್ರಶೇಖರ್ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: