ಮೈಸೂರು

ಸಿ.ಸಿ.ಬಿ. ಪೊಲೀಸರಿಂದ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ : ಓರ್ವನ ಬಂಧನ

ಮೈಸೂರು,ಡಿ.16:- ಮೈಸೂರು ನಗರದ ಸಿ.ಸಿ.ಬಿ. ಪೊಲೀಸರು ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯವರ ಸಹಯೋಗದೊಂದಿಗೆ ಮೈಸೂರು ನಗರದ ಅಶೋಕ ರಸ್ತೆಯ 23ನೇ ವೆಸ್ಟ್ ಕ್ರಾಸ್, ಲಷ್ಕರ್ ಮೊಹಲ್ಲಾದಲ್ಲಿರುವ ವಾಸದ ಮನೆಯ ಮೇಲೆ ದಾಳಿ ಮಾಡಿ ಅಲ್ಲಿ ಗೃಹ ಬಳಕೆಯ ಸಿಲಿಂಡರ್‍ಗಳನ್ನು ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ  ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಉಮರ್‍ಷರೀಫ್ @ ಅಜರ್ ಬಿನ್ ಅಬ್ದುಲ್ ಖಾಲಾಖ್‍ಷರೀಫ್, (32), ವಾಸ: #2691, 23ನೇ ಕ್ರಾಸ್, ಅಶೋಕ ರಸ್ತೆ, ಲಷ್ಕರ್ ಮೊಹಲ್ಲಾ, ಎಂದು ಗುರುತಿಸಲಾಗಿದ್ದು,ಈತನನ್ನು ವಶಕ್ಕೆ ಪಡೆದು ಅಕ್ರಮವಾಗಿ ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ 3 ದೊಡ್ಡ ಮತ್ತು 1 ಸಣ್ಣ ಗೃಹಬಳಕೆ ಸಿಲಿಂಡರ್‍ಗಳು, ಈ ಅಕ್ರಮ ರೀಫಿಲ್ಲಿಂಗ್‍ನಿಂದ ಸಂಪಾದಿಸಿದ್ದ 2010ರೂ. ಹಣ ಮತ್ತು ರೀಫಿಲ್ಲಿಂಗ್‍ಗೆ ಬಳಸುತ್ತಿದ್ದ ಇತರೇ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ಕಾರ್ಯವನ್ನು ಡಿ.ಸಿ.ಪಿ. ಡಾ. ವಿಕ್ರಮ ಅಮಟೆ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್‍ ಮಲ್ಲೇಶ್.ಎ., ಆಹಾರ ನಿರೀಕ್ಷಕರಾದ ಲಕ್ಷ್ಮಿ.ಟಿ.ಜೆ., ಸಿ.ಸಿ.ಬಿ.ಯ ಸಿಬ್ಬಂದಿಯವರಾದ ಎ.ಎಸ್.ಐ. ಆರ್.ರಾಜು, ಜೋಸೆಫ್ ನರ್ಹೋನ, ಡಿ.ಶ್ರೀನಿವಾಸಪ್ರಸಾದ್, ಪುರುಷೋತ್ತಮ, ಅರುಣ್‍ಕುಮಾರ್, ಪುಷ್ಪಲತಾ, ಚಾಲಕರುಗಳಾದ ಧನಂಜಯ, ಶ್ರೀನಿವಾಸ ಮಾಡಿರುತ್ತಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: