ಕರ್ನಾಟಕಕ್ರೀಡೆಮೈಸೂರು

ಅಕ್ಟೋಬರ್ 1 ರಿಂದ 6 ರ ವರೆಗೆ ದಸರಾ ಕುಸ್ತಿ ಪಂದ್ಯಾವಳಿ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ 34 ನೇ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಮತ್ತು 10 ನೇ ಅಖಿಲ ಭಾರತ ಆಹ್ವಾನಿತ ಕುಸ್ತಿ ಪಂದ್ಯಾವಳಿಯು ಡಿ. ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣ, ದೊಡ್ಡಕೆರೆ ಮೈದಾನದಲ್ಲಿ ನಡೆಯಲಿವೆ.

ಅಕ್ಟೋಬರ್ 1 ರ ಮಧ್ಯಾಹ್ನ 3.30 ಕ್ಕೆ  ಕುಸ್ತಿ ಪಂದ್ಯಾವಳಿ ಆರಂಭಗೊಳ್ಳಲಿದ್ದು ಅಕ್ಟೋಬರ್ 6ಕ್ಕೆ ಸಮಾರೋಪಗೊಳ್ಳಲಿದೆ. ಅಕ್ಟೋಬರ್ 1 ರಂದು ಬೆಳಿಗ್ಗೆ 9 ಗಂಟೆಗೆ 34ನೇ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಕುಸ್ತಿಪಟುಗಳ ದೇಹತೂಕವನ್ನು ಡಿ. ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣ, ದೊಡ್ಡಕೆರೆ ಮೈದಾನದಲ್ಲಿ ತೆಗೆದುಕೊಳ್ಳಲಾಗುತ್ತದೆ.

8ನೇ ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಗಳು ಅಕ್ಟೋಬರ್ 4ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಡಿ.ದೇವರಾಜ ಅರಸ್  ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣ, ದೊಡ್ಡಕೆರೆ ಮೈದಾನದಲ್ಲಿ ನಡೆಯಲಿದೆ. 10ನೇ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವವರ ದೇಹತೂಕವನ್ನು ಅಕ್ಟೋಬರ್ 4 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಡಿ.ದೇವರಾಜ ಅರಸ್  ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣ, ದೊಡ್ಡಕೆರೆ ಮೈದಾನದಲ್ಲಿ ತೆಗೆದುಕೊಳ್ಳಲಾಗುವುದು.

10ನೇ ಅಖಿಲ ಭಾರತ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಗಳು ಅಕ್ಟೋಬರ್ 5 ರಂದು ಶ್ರೀ ಡಿ. ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣ, ದೊಡ್ಡಕೆರೆ ಮೈದಾನದಲ್ಲಿ ನಡೆಯಲಿದೆ. ನಾಡಕುಸ್ತಿ ಪಂದ್ಯಾವಳಿಗಳು ಅಕ್ಟೋಬರ್ 1 ರಿಂದ 6 ರ ವರೆಗೂ ನಡೆಯಲಿದೆ.

ಪುರುಷ ಮತ್ತು ಮಹಿಳಾ ಕುಸ್ತಿಪಟುಗಳ ವಾಸ್ತವ್ಯಕ್ಕಾಗಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೋಚ್ ಗಳಿಗೂ ವಸತಿ ಸೌಕರ್ಯವಿದೆ. ವಾಸ್ತವ್ಯ ಸ್ಥಳದಿಂದ ಕುಸ್ತಿ ಅಖಾಡ ಸ್ಥಳಕ್ಕೆ ಬರಲು ಮತ್ತು ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಭದ್ರತಾ ಸಿಬ್ಬಂದಿಯನ್ನೂ ಅವರು ವಾಸ್ತವ್ಯ ಹೂಡುವ ಸ್ಥಳಗಳಲ್ಲಿ ನೇಮಿಸಲಾಗಿದೆ. ಪಾಯಿಂಟ್ ಕುಸ್ತಿ ಪಂದ್ಯಾವಳಿಗಳಿಗೆ ಅನುಭವೀ ತೀರ್ಪುಗಾರರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ. ಮಹಿಳಾ ಕುಸ್ತಿಪಟುಗಳು ವಿಶ್ರಾಂತಿ ತೆಗೆದುಕೊಳ್ಳಲು ಹಾಗೂ ಇತರೆ ಅವಶ್ಯಕತೆಗಳಿಗಾಗಿ ಅಖಾಡಾದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದಲ್ಲದೇ ಸೂಕ್ತ ಭದ್ರತೆಯನ್ನೂ ಮಾಡಲಾಗುವುದು ಎಂದು ಕುಸ್ತಿ ಉಪಸಮಿತಿಯ ಕಾರ್ಯದರ್ಶಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಿ. ರವಿಕುಮಾರ್, ಕೆಇಎಸ್ ತಿಳಿಸಿದ್ದಾರೆ.

ಪಂದ್ಯಾವಳಿಯಲ್ಲಿನ ವಿಜೇತರಿಗೆ ನೀಡುವ ಬಹುಮಾನದ ವಿವರ

ಪುರುಷರ ವಿಭಾಗ

ತೂಕ

I II III III
57 ಕೆಜಿವರೆಗೆ 4,000 ರೂ. 3,000 ರೂ 2,000 ರೂ 2,000 ರೂ
61ಕೆಜಿವರೆಗೆ 6,000 ರೂ. 4,000 ರೂ 3,000 ರೂ. 3,000 ರೂ
65ಕೆಜಿವರೆಗೆ 8,000 ರೂ 6,000 ರೂ 4,000 ರೂ 4,000 ರೂ
70ಕೆಜಿವರೆಗೆ 10,000 ರೂ 8,000 ರೂ 5,000 ರೂ 5,000 ರೂ
74ಕೆಜಿವರೆಗೆ 12,000 ರೂ 10,000 ರೂ 6,000 ರೂ 6,000 ರೂ
86ಕೆಜಿವರೆಗೆ 14,000 ರೂ 12,000 ರೂ 7,000 ರೂ 7,000 ರೂ
97ಕೆಜಿವರೆಗೆ 16,000 ರೂ 14,000 ರೂ 8,000 ರೂ 8,000 ರೂ
97ರಿಂದ125ಕೆಜಿವರೆಗೆ 17,000 ರೂ 15,000 ರೂ 9,000 ರೂ 9,000 ರೂ

ಮಹಿಳೆಯರ ವಿಭಾಗ

ತೂಕ

I

II

III

III

48ಕೆಜಿವರೆಗೆ 4,000 ರೂ 3,000 ರೂ 2,000 ರೂ 2,000 ರೂ
53ಕೆಜಿವರೆಗೆ 5,000 ರೂ 4,000 ರೂ 3,000 ರೂ 3,000 ರೂ
55ಕೆಜಿವರೆಗೆ 6,000 ರೂ 5,000 ರೂ 3,500 ರೂ 3,500 ರೂ
58ಕೆಜಿವರೆಗೆ 8,000 ರೂ 6,000 ರೂ 4,500 ರೂ 4,500 ರೂ
60ಕೆಜಿವರೆಗೆ 10,000 ರೂ 8,000 ರೂ 5,500 ರೂ 5,500 ರೂ
63ಕೆಜಿವರೆಗೆ 12,000 ರೂ 10,000 ರೂ 6,500 ರೂ 6,500 ರೂ
69ಕೆಜಿವರೆಗೆ 14,000 ರೂ 12,000 ರೂ 7,500 ರೂ 7,500 ರೂ
75ಕೆಜಿವರೆಗೆ 16,000 ರೂ 14,000 ರೂ 8,500 ರೂ 8,500 ರೂ

 

Leave a Reply

comments

Related Articles

error: