ದೇಶಪ್ರಮುಖ ಸುದ್ದಿ

ತಿಮ್ಮಪ್ಪನ ಹುಂಡಿಯಲ್ಲಿ ಕಳೆದ ವರ್ಷ 1,018 ಕೋಟಿ ರೂ. ಕಾಣಿಕೆ ಸಂಗ್ರಹ

ತಿರುಪತಿ: ದೇಶದ ಶ್ರೀಮಂತ ದೇವರಲ್ಲಿ ಒಬ್ಬನಾದ ತಿರುಪತಿ ವೆಂಕಟೇಶ್ವರನ ಹುಂಡಿಗೆ ಕಳೆದ ವರ್ಷ 1,018 ಕೋಟಿ ರೂ. ನಗದು ರೂಪದ ಕಾಣಿಕೆ ಹರಿದುಬಂದಿದೆ ಎಂದು ದೇವಸ್ಥಾನ ತಿಳಿಸಿದೆ.

ಚಿನ್ನ, ಬೆಳ್ಳಿ ಆಭರಣಗಳೂ ಹುಂಡಿಯಲ್ಲಿ ಸಂದಾಯವಾಗಿವೆ. 67.12 ಲಕ್ಷ ಭಕ್ತರು ತಲಾ 300 ರೂ. ನೀಡಿ ಆನ್‌ಲೈನ್‌ ಮೂಲಕ ದರ್ಶನದ ಟಿಕೆಟ್‌ ಖರೀದಿಸಿದ್ದಾರೆ. ಈ ಮೂಲಕ 201 ಕೋಟಿ ರೂ. ಹೆಚ್ಚುವರಿ ಆದಾಯ ದೊರೆತಿದೆ ಎಂದು ಅವರು ಹೇಳಿದ್ದಾರೆ.

2016ರಲ್ಲಿ  ಸುಮಾರು 2.6 ಕೋಟಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರೆಲ್ಲ ಕಾಣಿಕೆ ನೀಡಿ, ಹುಂಡಿಯಲ್ಲಿ ಸಂದಾಯವಾದ ಹಣ 1,018 ಕೋಟಿ ರೂ. ಎಂದು ಟಿಟಿಡಿ ಕಾರ್ಯ ನಿರ್ವ ಹಣಾಧಿಕಾರಿ ಡಿ. ಸಾಂಬಶಿವ ರಾವ್‌ ತಿಳಿಸಿದ್ದಾರೆ.

Leave a Reply

comments

Related Articles

error: