ಕರ್ನಾಟಕಪ್ರಮುಖ ಸುದ್ದಿ

ಜ.4ರ ವರೆಗೆ ಮಧ್ಯ ಮಾರಾಟ ನಿಷೇಧ

ಹಾಸನ (ಡಿ.17): ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಸಂಬಂಧ ಆಲೂರು ತಾಲ್ಲೂಕಿನ ಮಲ್ಲಾಪುರ, ನರಸೀಪುರ, ಅರಸೀಕೆರೆ ತಾಲ್ಲೂಕಿನ ನರಸೀಪುರ, ಶ್ಯಾನೆಗೆರೆ, ಚನ್ನರಾಯಪಟ್ಟಣ್ಣ ತಾಲ್ಲೂಕಿನ ಹಿರೀಸಾವೆ, ಬೆಕ್ಕ, ಕಬ್ಬಳಿ, ಹಾಸನ ತಾಲ್ಲೂಕಿನ ಕುದುರುಗುಂಡಿ ಹಾಗೂ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಡಿ.17 ರಿಂದ 4 ಜನವರಿ 2019ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲಾ ಬಗೆಯ ಅಮಲು ಪಾನೀಯ ಹಾಗೂ ಮಧ್ಯ ಶೇಖರಣೆ, ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವಂತಹ ಎಲ್ಲಾ ಬಗೆಯ ಸ್ಟಾರ್ ಹೋಟೆಲ್‍ಗಳು, ಡಾಬಾಗಳು, ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಹಾಗೂ ಮದ್ಯ ಸಾಗಾಟ ಮತ್ತು ಸರಬರಾಜು ಮಾಡುವುದನ್ನು ಸಹ ಸಂಪೂರ್ಣವಾ ನಿಷೇಧಿಸಿ ಆದೇಶಿಸಿದೆ ಹಾಗೂ ಮದ್ಯ ಮಾರಾಟ ನಿಷೇದಿತ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಿಸಿ ಮೊಹರು ಮಾಡಿ ಅದರ ಕೀಯನ್ನು ಸ್ಥಳೀಯ ತಾಲ್ಲೂಕು ದಂಡಾಧಿಕಾರಿಗಳಿಗೆ ಒಪ್ಪಿಸಬೇಕಾಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: