ಮೈಸೂರು

ಲೇಖಕ ಡಾ.ಪ್ರಸನ್ನ ಹೆಗಡೆ ಅವರಿಗೆ ಅಭಿನಂದನೆ : ‘ದುಬಾರಿ ಬಾಲ ನಿನಾದ’ ಕೃತಿ ಲೋಕಾರ್ಪಣೆ

ಮೈಸೂರು,ಡಿ.17:- ಜ್ಞಾನವರ್ಧಿನಿ ಎಜ್ಯುಕೇಷನಲ್ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿಚಾರ ವೇದಿಕೆ, ಭೂಮಿಗಿರಿ ಪ್ರಕಾಸ ವತಿಯಿಂದ ಕಲಾಮಂದಿರದ ಮನೆಯಂಗಳದಲ್ಲಿಂದು ಲೇಖಕ ಡಾ.ಪ್ರಸನ್ನ ಹೆಗಡೆ ಅವರ ‘ದುಬಾರಿ ಬಾಲ ನಿನಾದ’ ಕೃತಿ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸಾಹಿತಿ ಮಳಲಿ ವಸಂತ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಸನ್ನ ಹೆಗಡೆ ಅವರು ಸಕಲ ಕಲಾವಲ್ಲಭರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಹೆಗಡೆ ಅವರು ಕೈಯ್ಯಾಡಿಸದ ಕ್ಷೇತ್ರವಿಲ್ಲ. ಅವರ ಬಯೋಡೇಟಾ ನೋಡಿ ದಂಗಾದೆ. ನಾವು ಸರಿಯಾಗಿ ಎಷ್ಟೋ ಜನರ ವಿಚಾರವನ್ನು ತಿಳಿದುಕೊಳ್ಳುವುದಿಲ್ಲ. ಅವರು ಕವಿ, ವಿಮರ್ಶಕ, ಚಿತ್ರನಟ, ಹೇಳುತ್ತಾ ಹೋದರೆ ಮುಗಿಯದು ಎಂದು ಬಣ್ಣಿಸಿದರು. ಹಲವಾರು ಪತ್ರಿಕೆಗಳಲ್ಲಿ ಅಂಕಣಬರೆದಿದ್ದಾರೆ. ಕಥೆ, ಕಾದಂಬರಿ ವಚನ, ಚುಟುಕು, ಚಲನಚಿತ್ರ ಸಂಭಾಷಣೆ, ಧಾರವಾಹಿ. ಕಿರುಚಿತ್ರಗಳ ಸಂಭಾಷಣೆಗಳನ್ನು ಬರೆದಿದ್ದಾರೆ. ಚದುರಂಗದಾಟವನ್ನು ಆಡುತ್ತಾರೆ. ಸಂಸ್ಕೃತದಲ್ಲಿರುವ ಭಗವದ್ಗೀತೆಯನ್ನುಕರ್ಣಯೋಗ, ಭಕ್ತಿಯೋಗ, ಜ್ಞಾನ ಯೋಗವೆಂದು ಮೂರು ಸಂಪುಟದಲ್ಲಿ ಕನ್ನಡದಲ್ಲಿ ಹೊರ ತಂದಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ಕೂಡ ಲಭಿಸಿದೆ ಎಂದರು.

ಕಾರ್ಯಕ್ರಮದಲ್ಲಿ  ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪದ್ಮಾಶೇಖರ್ ಅವರು ಪ್ರಸನ್ನ ಹೆಗಡೆ ಅವರನ್ನು ಅಭಿನಂದಿಸಿದರು.

ಈ ಸಂದರ್ಭ ಸಂಸ್ಕೃತಿ ಪೋಷಕ ಡಾ.ರಘುರಾಮ್ ವಾಜಪೇಯಿ, ಭೂಮಿಗಿರಿ ಪ್ರಕಾಶನದ ಮಾಲೀಕ ಎನ್.ಬೆಟ್ಟೇಗೌಡ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: