ಪ್ರಮುಖ ಸುದ್ದಿಮೈಸೂರು

ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆ

ಶ್ರೀ ರಮಣ ಯೋಗ ಶಿಕ್ಷಣ ಕೇಂದ್ರದ ಬೆಳ್ಳಿ ಹಬ್ಬದ ಪ್ರಯುಕ್ತ

ಮೈಸೂರು. ಡಿ.17: ನಗರದ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಟ್ರಸ್ಟ್ ವತಿಯಿಂದ ಯೋಗ ಮಂದಿರದ ಹಾಗೂ ಶ್ರೀ ರಮಣ ಯೋಗ ಶಿಕ್ಷಣ ಕೇಂದ್ರದ 25ನೇ ವಾರ್ಷಿಕೋತ್ಸವದ ಪ್ರಯುಕ್ತ “ಅಂತರರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ಹಾಗೂ ಅಂತರಶಾಲಾ -ಕಾಲೇಜು ಮಟ್ಟದ ಯೋಗಾಸನ ಸ್ಪರ್ಧೆ 2019 ಅನ್ನು ಏರ್ಪಡಿಸಲಾಗಿದೆ.

ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಈ ಸ್ಪರ್ಧೆಗೆ  ಜ.12 ರಂದು ಸಂಜೆ 4ಗಂಟೆಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡಲಿದ್ದು. ಗಣಪತಿ ಸಚ್ಚಿದಾನಂದ ಆಶ್ರಮದ  ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸುವರು, ಜಿಲ್ಲಾ ಆಯುಷ್ ಇಲಾಖೆಯ ಡಾ.ಬಿ.ಎಸ್.ಸೀತಾಲಕ್ಷ್ಮೀ , ಡಾ.ಲಕ್ಷ್ಮೀನಾರಾಯಣ ಶೆಣೈ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಡಾ.ಬಿ.ಪಿ.ಮೂರ್ತಿ, ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಯೋಗಾಚಾರ್ಯ ಬಿ.ಶಾಂತರಾಮ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕನ್ವೆಷನ್ ಹಾಲ್ ನಲ್ಲಿ, ವಿವಿಧ ವಯೋಮಿತಿಯನ್ನೊಳಗೊಂಡ 7 ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದೆ, 55 ವರ್ಷ ಮೇಲ್ಪಟ್ಟವರಿಗೂ ಅವಕಾಶ ಕಲ್ಪಿಸಲಾಗಿದೆ, ಮಹಿಳೆಯರು ಮತ್ತು ಪುರುಷರು ಪಾಲ್ಗೊಳ್ಳಬಹುದಾಗಿದ್ದು, ದೇಶದ ಪಂಜಾಬ್, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿದೇಶಿ ಯೋಗಪಟುಗಳು ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜ.13ರಂದು ನಡೆಯುವ ಸಮಾರೋಪದಲ್ಲಿ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಸ್ವಾಮಿ ಮಹೇಶಾತ್ಮನಂದಜೀ ಮಹಾರಾಜ್ ಸಾನಿಧ್ಯ ವಹಿಸಲಿದ್ದು ಭಾರತೀ ಯೋಗಧಾಮದ ಸಂಸ್ಥಾಪಕ ಡಾ.ಕೆ.ಎಲ್.ಶಂಕರನಾರಾಯಣ ಜೋಯಸ್, ಶಾಸಕ ಎಲ್.ನಾಗೇಂದ್ರ, ಸಮಾಜ ಸೇವಕ ಕೆ.ರಘುರಾಮಯ್ಯ ವಾಜಪೇಯಿ, ಇಂಡಿಯನ್ ಫೌಂಡೇಷನ್ ಅಧ್ಯಕ್ಷ ಭರತ್ ಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದು. ವಿಜೇತರಿಗೆ ಬಹುಮಾನ ಹಾಗೂ ಪಲಕ ವಿತರಿಸಲಾಗುವುದು ಎಂದು ತಿಳಿಸಿದರು.

ದುಂಡಯ್ಯ, ಪುರುಷೋತ್ತಮ. ಬಿ.ಪಿ.ಮೂರ್ತಿ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: