
ಪ್ರಮುಖ ಸುದ್ದಿಮೈಸೂರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.19ರಂದು ಬ್ಯಾಂಕ್ ಮಿತ್ರರಿಂದ ಬೃಹತ್ ಪ್ರತಿಭಟನೆ
ಮೈಸೂರು,ಡಿ.17 : ಬ್ಯಾಂಕ್ ಮಿತ್ರರ ಗುತ್ತಿಗೆ ಪದ್ಧತಿ ಕೈ ಬಿಡಬೇಕು, ಹಳೆ ಬ್ಯಾಂಕ್ ಮಿತ್ರರನ್ನೇ ಮುಂದುವರೆಸಬೇಕು, ತಮ್ಮಗೂ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.19ರಂದು ಬೆಂಗಳೂರಿನ ಪುರಭವನದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ಮಿತ್ರರ್ಸ್ ಸಂಘದ ಉಪಾಧ್ಯಕ್ಷ ವೀರಭದ್ರಸ್ವಾಮಿ ತಿಳಿಸಿದರು.
ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೆನರಾ ಬ್ಯಾಂಕಿನಲ್ಲಿ (2016) ಇಲ್ಲಿಯವರೆಗೂ ಕಾರ್ಯನಿರ್ವಹಿಸುತ್ತಿರುವ ಬಿಸಿಎ (ಬ್ಯಾಂಕ್ ಕಮಿಷನ್ ಏಜೆಂಟ್ಸ್)ಗಳನ್ನು ಬದಲಾಯಿಸಿ ಹೊರ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿಗೆ ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿ, ಏಜೆಂಟ್ ಗಳಿಗೆ ಮಾರಕವಾಗಿರುವ ಈ ಪದ್ಧತಿ ಕೈಬಿಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಹಾಗೂ ತಮ್ಮನ್ನು ಖಾಯಂಗೊಳಿಸಿ, ಪಿಎಫ್ ಮತ್ತು ಇಎಸ್ ಐ ವ್ಯವಸ್ಥೆಯನ್ನು ಒದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಂದು ಬೆಳಗ್ಗೆ 10 ಗಂಟೆಯಿಂದ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ 30 ಜಿಲ್ಲೆಗಳ ಬ್ಯಾಂಕ್ ಮಿತ್ರರು ಪಾಲ್ಗೊಳ್ಳುತ್ತಿದ್ದು ಮೈಸೂರಿನಿಂದ 250 ಜನರು ಭಾಗಿಯಾಗುತ್ತಿದ್ದೇವೆ. ಎಐಟಿಯುಸಿ, ಎಐಬಿಇಎ (ಅಖಿಲ ಭಾರತಿಯ ಬ್ಯಾಂಕ್ ನೌಕರರ ಸಂಘ), ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಕೈಜೋಡಿಸಿವೆ ಎಂದು ತಿಳಿಸಿದರು.
ಮೈಸೂರು ರಕ್ಷಣಾ ವೇದಿಕೆಯ ಮೈಕಾ ಪ್ರೇಮಕುಮಾರ್, ಮೋಹನ್, ಎಸಿಎ ದ ಹೇಮಂತ್ ಕುಮಾರ್, ಪ್ರೀತಿಲಕ್ಷ್ಮೀ, ನಂಜುಂಡಸ್ವಾಮಿ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)