ಪ್ರಮುಖ ಸುದ್ದಿಮನರಂಜನೆ

ಪೈರಸಿ ತಡೆಯುವಂತೆ ‘ಕೆಜಿಎಫ್’ ಚಿತ್ರತಂಡ ಮನವಿ! ತುರ್ತು ಸಹಾಯವಾಣಿಯೂ ಲಭ್ಯ

ಬೆಂಗಳೂರು (ಡಿ.17): ಇದೇ ಶುಕ್ರವಾರ ಬಹುನಿರೀಕ್ಷಿತ ‘ಕೆಜಿಎಫ್’ ಚಿತ್ರವು ಸಿನಿಮಾ ಚಿತ್ರ ಮಂದಿರಕ್ಕೆ ಬರುತ್ತಿದೆ. ಇದೇ ವೇಳೆ ಬಿಡುಗಡೆಗೆ ಮೊದಲು ‘ಕೆಜಿಎಫ್’ ಚಿತ್ರತಂಡ ಒಂದು ಕೋರಿಕೆಯನ್ನ ಅಭಿಮಾನಿಗಳಲ್ಲಿ ಮಾಡಿಕೊಂಡಿದೆ.

ನಿರ್ಮಾಪಕ ವಿಜಯ್ ಕಿರಗಂಧೂರ್ ತಮ್ಮ ಟ್ವಿಟರ್ ಖಾತೆಯ ಮೂಲಕ ಕನ್ನಡ ಸಿನಿಮಾಭಿನಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ಕೆಜಿಎಫ್’ ಸಿನಿಮಾದ ಹಿಂದೆ ನಾಲ್ಕು ವರ್ಷದ ಶ್ರಮ ಇದೆ. ಈ ಸಿನಿಮಾಗೆ ನಿಮ್ಮ ಪೂರ್ಣ ಪ್ರೋತ್ಸಾಹ ಬೇಕು. ಯಾರಾದರೂ, ಪೈರಸಿ ಮಾಡಿಸಿದರೆ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ. 8978650014 ಈ ಸಂಖ್ಯೆಯನ್ನು ಸಹ ನೀಡಿದೆ.

‘ಕೆಜಿಎಫ್’ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಬಿಡುಗಡೆ ಆಗುತ್ತಿರುವ ಕಾರಣ ಪೈರಸಿ ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಚಿತ್ರತಂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈಗಾಗಲೇ, ಸಿನಿಮಾದ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಯಶ್ ಅವರ ಈ ಮಹತ್ವಾಕಾಂಕ್ಷೆಯ ಸಿನಿಮಾ ನಾಲ್ಕು ದಿನಗಳಲ್ಲಿ ಬಿಡುಗಡೆಯಾಗಲಿದೆ. ಪೈರಸಿ ವಿರುದ್ಧವಿರುವ ಚಿತ್ರಪ್ರೇಮಿಗಳು ಎಲ್ಲಿ ಕಂಪ್ಲೇಂಟ್ ಕೊಡೋದು ಯಾರನ್ನ ಸಂಪರ್ಕ ಮಾಡೋದು ಎಂಬ ಚಿಂತೆ ಈಗಿಲ್ಲ. (ಎನ್.ಬಿ)

Leave a Reply

comments

Related Articles

error: