ಸುದ್ದಿ ಸಂಕ್ಷಿಪ್ತ

ಸೂಕ್ಷ್ಮ,ಸಣ್ಣ ಕೈಗಾರಿಕೆಗಳ ವಿಳಂಬ ಕಾಯ್ದೆ : ಅರಿವು ಕಾರ್ಯಕ್ರಮ ನಾಳೆ

ಮೈಸೂರು,ಡಿ.17 : ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ‍್ಯಮ ಉದ್ಯಮಗಳ ಮಂತ್ರಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಜಂಟಿಯಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ವಿಳಂಬ ಪಾವತಿ ಕಾಯ್ದೆ 2006 ಮತ್ತು ಸೂಕ್ಷ್ಮ ಸಣ್ಣ ಉದ್ಯಮಗಳ ಸೌಲಭ್ಯ ಪರಿಷತ್ತಿನ ಸಾಮಾರ್ಥ್ಯದ ಅರಿವು ಕಾರ್ಯಕ್ರಮವನ್ನು ನಾಳೆ(18) ಬೆಳಗ್ಗೆ 10.30ಕ್ಕೆ ವಿದ್ಯಾವಿಕಾಸ ಕಾಲೇಜಿನ ಲಲಿತ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದೆ.

ಸೂಕ್ಷ್ಮ,, ಸಣ್ಣ ಮತ್ತು ಮಧ‍್ಯಮ ಉದ್ಯಮಗಳ ನಿರ್ದೇಶನಾಲಯ ಆಯುಕ್ತ ಗುಂಜನ್ ಕೃಷ್ಣ ಉದ್ಘಾಟಿಸಲಿದ್ದಾರೆ. ಕಾಸಿಯಾ ಉಪಾಧ್ಯಕ್ಷ ಆರ್.ರಾಜು, ಎಂಎಸ್.ಎಂ.ಇ ನಿರ್ದೇಶನಾಲಯ ಅಪರ ನಿರ್ದೇಶಕ ಹೆಚ್.ಎಸ್.ಶ್ರೀನಿವಾಸ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಡಿ.ಕೆ.ಲಿಂಗಾರಾಜು ಇರಲಿದ್ದಾರೆ, ಮಾಜಿ ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: