ಪ್ರಮುಖ ಸುದ್ದಿ

ನನ್ನ ಮಗನಿಗೆ ವಧು ಹುಡುಕಾಟ, ಪ್ರಪೋಸಲ್ ಗೆ ಬಂದ ಫೋಟೋ ನೋಡುತ್ತಿದ್ದೆ : ಶಾಸಕ ಎನ್.ಮಹೇಶ್ ಸ್ಪಷ್ಟನೆ

ರಾಜ್ಯ(ಬೆಳಗಾವಿ)ಡಿ.18:- ಶಾಸಕ ಎನ್.ಮಹೇಶ್ ಅವರು ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರ್ಣ ರಂಜಿತವಾಗಿ ವರದಿ ಮಾಡಿರುವ ಬಗ್ಗೆ ಶಾಸಕರು ಸ್ಪಷ್ಟೀಕರಣ ನೀಡಿದ್ದಾರೆ.

ಅಧಿವೇಶನದ ವೇಳೆ ಎನ್.ಮಹೇಶ್ ಅವರು ಯುವತಿಯೋರ್ವಳ ಚಿತ್ರವನ್ನು ವೀಕ್ಷಿಸುತ್ತಿದ್ದರು ಎಂದು ವರದಿ ಮಾಡಿದ್ದ ಖಾಸಗಿಸುದ್ದಿ ವಾಹಿನಿ ಈ ಹಿಂದೆ ಬಿಜೆಪಿ ಶಾಸಕರು ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿರುವ ಘಟನೆಗೆ ಇದನ್ನು ಹೋಲಿಸಿ ವರದಿ ಮಾಡಿತ್ತು. ಆದರೆ ವಾಸ್ತವ ಅಂಶವೇ ಬೇರೆಯೇ ಆಗಿದೆ. ಎನ್.ಮಹೇಶ್ ಅವರು ತಮ್ಮ ಪುತ್ರನ ಮದುವೆಗಾಗಿ ಹುಡುಗಿ ಹುಡುಕಾಟದಲ್ಲಿದ್ದಾರೆ. ಈ ಸಂಬಂಧ ಅವರಿಗೆ ಹುಡುಗಿಯರ ಫೋಟೋಗಳನ್ನು ಅವರ ಆಪ್ತರು ಕಳುಹಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಫೋಟೋಗಳನ್ನು ನೋಡಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕರು ನನ್ನ ಮಗನಿಗೆ ವಧು ಹುಡುಕುತ್ತಾ ಇದ್ದೇನೆ. ಇದಕ್ಕೆ ಸಂಬಂಧಿಸಿ ಕೆಲವು ಹುಡುಗಿಯರ ಫೋಟೊ ಹಾಗೂ ವಿವರಗಳನ್ನು ಗೆಳೆಯ ಶಿವಕುಮಾರ್ ಅವರು ಕಳುಹಿಸಿದ್ದರು. ನನ್ನ ಮಗನಿಗೆ ಬಂದ ಪ್ರಪೋಸಲ್ ಗಳ ಚಿತ್ರವನ್ನು ಸಹಜವಾಗಿ, ಓರ್ವ ತಂದೆಯಾಗಿ ಕುತೂಹಲದಿಂದ ನೋಡಿದೆ ಅಷ್ಟೆ. ಇದಕ್ಕೇ ಬಣ್ಣ ಹಚ್ಚಿ ವರದಿ ಮಾಡಿರುವುದು ಸರಿಯಲ್ಲ.  ಅದು ಓರ್ವ ಹೆಣ್ಣು ಮಗಳ ಮರ್ಯಾದೆಯ ಪ್ರಶ್ನೆಯಾಗಿದೆ. ಅಲ್ಲದೆ ಕ್ಷೇತ್ರದ ಆಸ್ಪತ್ರೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ವಾಟ್ಸಾಪ್ ನಲ್ಲಿ ಜನರು ಮಾಹಿತಿ ಕಳುಹಿಸಿದ್ದರು. ಇದನ್ನು ನೋಡುತ್ತಿದ್ದ ಸಂದರ್ಭದಲ್ಲಿ ಫೋಟೋಗಳು ಬಂದಿದೆ. ಎಲ್ಲಕಿಂತ ಮುಖ್ಯವಾಗಿ ಈ ಫೋಟೋವನ್ನು ವೀಕ್ಷಿಸಿರುವುದು ಸದನದ ಕಲಾಪಗಳ ಸಮಯದಲ್ಲಿ ಅಲ್ಲ, ಬದಲಾಗಿ ಸದನ ಆರಂಭಕ್ಕೂ ಮುನ್ನ ವೀಕ್ಷಿಸಿದ್ದೇನೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: