ಮೈಸೂರು

ಆನೆ ದಾಳಿ : ಮೇಲ್ಛಾವಣಿ ಕುಸಿದು ಮಹಿಳೆಗೆ ಗಾಯ

ಕಾಡಾನೆ ದಾಳಿಗೆ ಗುಡಿಸಲು ಮೇಲ್ಛಾವಣಿಯ ಗೋಡೆ ಕುಸಿತಗೊಂಡು ಆದಿವಾಸಿ ಮಹಿಳೆ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ಹೆಚ್.ಡಿ.ಕೋಟೆ ತಾಲೂಕಿನ ಸೋನಹಳ್ಳಿ ಹಾಡಿಯ ಮಹದೇವಮ್ಮ (45) ಎಂದು ಗುರುತಿಸಲಾಗಿದೆ.

ಮಹದೇವಮ್ಮ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಆನೆ ದಾಳಿ ನಡೆಸಿದ್ದು, ಗುಡಿಸಲಿನ ಮೇಲ್ಛಾವಣಿ ಗೋಡೆ ಕುಸಿದು ಮಹದೇವಮ್ಮ ಅವರ ಕಾಲಿನ ಮೇಲೆ ಬಿದ್ದಿದ್ದು, ಗಂಭೀರ ಸ್ವರೂಪದ ಗಾಯಗಳಾಗಿವೆ ಎನ್ನಲಾಗಿದೆ. ಗಾಯಾಳುವನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಎಚ್.ಡಿ.ಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

comments

Related Articles

error: