ಮೈಸೂರು

ಮೃತರ ಕುಟುಂಬಕ್ಕೆ ಇಂದು ಪರಿಹಾರ ವಿತರಣೆ; ಗುಣಮುಖರಾಗುವವರೆಗೂ ಡಿಸ್ಚಾರ್ಜ್ ಮಾಡಬೇಡಿ : ಸಚಿವ ಪುಟ್ಟರಂಗಶೆಟ್ಟಿ

ಮೈಸೂರು,ಡಿ.18:- ಮೈಸೂರಿನ ಕೆ.ಆರ್.ಆಸ್ಪತ್ರೆಗೆ  ಇಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.

ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥತಗೊಂಡವರು ಸಂಪೂರ್ಣ ಗುಣ ಮುಖರಾಗುವವರೆಗೂ ಆಸ್ಪತ್ರೆಯಿಂದ ಕಳಿಸದಂತೆ ವೈದ್ಯರಿಗೆ ತಾಕೀತು ಮಾಡಿದರು. ಯಾರೇ ಕುಟುಂಬಸ್ಥರು ಬಂದು ಗಲಾಟೆ ಮಾಡಿದರು ಕಳುಹಿಸಬೇಡಿ. ಯಾವ ಕಾರಣಕ್ಕೂ ಇವರನ್ನು ಬೇರೆಡೆ ಕಳಿಸಕೂಡದು ಎಂದರು.

14 ಕುಟುಂಬಗಳಿಗೆ ಇಂದು ಪರಿಹಾರ ವಿತರಿಸುತ್ತೇವೆ. ಮೃತರ ಮನೆಗಳಿಗೆ ತೆರಳಿ ಪರಿಹಾರ ವಿತರಿಸುತ್ತೇವೆ. 5 ಲಕ್ಷ ಪರಿಹಾರ ನೀಡುತ್ತೇವೆ. ವೈಯುಕ್ತಿಕವಾಗಿಯೂ ನಾನು ನರೇಂದ್ರ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪರಿಹಾರ ನೀಡುತ್ತೇವೆ. ಅವರಿಗೆ ಒಂದು ತಿಂಗಳಿಗೆ ಆಗುವಷ್ಟು ಪಡಿತರ ವಸ್ತುಗಳನ್ನು ನೀಡುತ್ತೇವೆ. ಎಲ್ಲರು ಗುಣಮುಖರಾಗುತ್ತಿದ್ದಾರೆ. ಆದರೂ ಯಾರನ್ನು ಡಿಸ್ಚಾರ್ಜ್ ಮಾಡಬೇಡಿ ಎಂದು ವೈದ್ಯರಿಗೆ ಸೂಚಿಸಿದ್ದೇನೆ ಎಂದರು. ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಆದರೂ ಯಾರನ್ನೂ ಡಿಸ್ಚಾರ್ಜ್ ಮಾಡಬೇಡಿ ಎಂದು ವೈದ್ಯರಿಗೆ ಸೂಚಿಸಿದ್ದೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: