
ಪ್ರಮುಖ ಸುದ್ದಿಮೈಸೂರು
ಜೀನಿಯಸ್ ಕಾಲೇಜಿನಿಂದ ಅಂತರ ಕಾಲೇಜು ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ
ಮೈಸೂರು,ಡಿ.18 : ಬನ್ನೂರು ರಸ್ತೆಯಲ್ಲಿರುವ ಜೀನಿಯಸ್ ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ‘ಜನೆರಿಕ್ಸ್ 2018’ ಎಂಬ ಅಂತರ ಕಾಲೇಜು ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಜಿ.ವಿ.ರಮೇಶ್ ತಿಳಿಸಿದರು.
ಡಿ.20 ರಿಂದ 22ರವರೆಗೆ ಆಯೋಜಿಸಿರುವ ಸ್ಪರ್ಧೆಗಳಲ್ಲಿ ಸುಮಾರು 14 ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ಡಿ.20ರಂದು ಬೆಳಗ್ಗೆ 9 ಗಂಟೆಗೆ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಮಹಾಪೌರೆ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿಲಿದ್ದಾರೆ, ಕಬ್ಬಡಿ, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ, ಟಿಕ್ ಟಾಕ್ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.21ರಂದು ಬೆಳಗ್ಗೆ 10 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಹಾರಮೇಳ ನಡೆಯಲಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ್ ಉದ್ಘಾಟಿಸುವರು.ಡಿ.23ರಂದು ಸಂಜೆ 6 ಗಂಟೆಗೆ ನಗರದ ಹೊರವಲಯದಲ್ಲಿರುವ ಜಲ್ ಮಹಲ್ ರೆಸಾರ್ಟ್ ನಲ್ಲಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮೈಸೂರು ವಿವಿಯ ಕುಲಸಚಿವ ಡಾ.ಜೆ.ಸೋಮಶೇಖರ್, ಚಿತ್ರನಟ ಪವನ್ ತೇಜ, ಮಿಸ್ ಏಷ್ಯಾ ಎಲಿಗೆಂಟ್ ಸ್ಪರ್ಧೆಯ ರನ್ನರಫ್ ಆದ ರೂಪದರ್ಶಿ ಎನ್.ಬಿ.ಸ್ನೇಹಗೌಡ, ಶಾರದಾನಿಕೇತನ ಸಂಸ್ಥೆ ಅಧ್ಯಕ್ಷ ಜಿ.ಪ್ರಭು, ಪ್ರಾಂಶುಪಾಲೆ ಸುರೇಖಾ ಎನ್.ಪ್ರಭು ಹಾಜರಿರಲಿದ್ದು. ವಿದ್ಯಾರ್ಥಿಗಳಿಂದ ಫ್ಯಾಷನ್ ಶೋ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯೆ ಎನ್.ಸುರೇಖಾ ಪ್ರಭು, ಪ್ರಾಧ್ಯಾಪಕರಾದ ಗುರುಲಿಂಗು, ಕೆ.ಪರಮೇಶ್, ಮಹದೇವು, ಆಡಳಿತಾಧಿಕಾರಿ ಎಸ್.ಉಮೇಶ್ ಹಾಜರಿದ್ದರು. (ವರದಿ : ಕೆ.ಎಂ.ಆರ್)