ಮೈಸೂರು

ಗೋಕುಲಂ ಟಾಕೀಸ್ ಬಳಿ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲು

ಮೈಸೂರು,ಡಿ.18:- ಮೈಸೂರು-ಕೆ.ಆರ್.ಎಸ್ ಮುಖ್ಯರಸ್ತೆಯಲ್ಲಿ ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದೆ.

ಗೋಕುಲಂ ಟಾಕೀಸ್ ಬಳಿ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ.ಟ್ರಾನ್ಸ್ ಪಾರ್ಮರ್ ಬಳಿಯ ವಿದ್ಯುತ್ ತಂತಿವರೆಗೂ ನೀರು ಚಿಮ್ಮುತ್ತಿದೆ.ರಭಸದಿಂದ ನೀರು ಪೈಪಿನಿಂದ ಮೇಲಕ್ಕೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚಿಮ್ಮಿದ್ದು, ಅಪಾರ ಪ್ರಮಾಣದಲ್ಲಿ ನೀರು ರಸ್ತೆಯ ಮೇಲೆ ಹರಿದಿದೆ. ಪೈಪ್ ಒಡೆದು ನೀರು ಪೋಲಾಗುತ್ತಿರುವುದನ್ನು ಕಂಡ ಸಾರ್ವಜನಿಕರು ಕೂಡಲೇ ಬೆಳವಾಡಿ ಪಂಪ್ ಹೌಸ್ ಗೆ ಮಾಹಿತಿ ನೀಡಿದ್ದಾರೆ. ನೀರು ವಿಪರೀತವಾಗಿ ಹೊರ ಹೋಗುತ್ತಿರುವುದರಿಂದ, ನೀರು ಮೇಲಕ್ಕೆ ಚಿಮ್ಮುತ್ತಿರುವುದರಿಂದ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯುತ್ ಕಂಬ, ಹಾಗೂ ವಿದ್ಯುತ್ ಲೈನ್ ಗಳು ಹಾದು ಹೋದ ಕಾರಣ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪ್ರವಹಿಸುವುದನ್ನು ತಡೆಹಿಡಿಯಲಾಗಿದೆ. ಸ್ಥಳಕ್ಕೆ ಪಾಲಿಕೆಯ ಅಧಿಕಾರಿಗಳು ಹಾಗೂ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ. ಆದರೆ ದುರಸ್ತಿ ಕಾರ್ಯಕ್ಕೆ ಇನ್ನೆರಡು ಗಂಟೆಗಳ ಕಾಲ ಸಮಯ ತಗುಲಲಿದೆ ಎಂಬ ಮಾತು ಕೇಳಿ ಬಂದಿದೆ. ಜೆಸಿಬಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಈ ಅವಘಡ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: