ದೇಶ

ಹಿಮಾಚಲಪ್ರದೇಶದಲ್ಲಿ ಹೆಚ್ಚಿದ ಹಿಮಮಳೆ: ಶಿಮ್ಲಾಗೆ ಸಂಪರ್ಕ ಕಡಿತ

ಶಿಮ್ಲಾ: ಪ್ರವಾಸಿಗರ ನೆಚ್ಚಿನ ತಾಣವಾದ ಹಿಮಾಚಲ ಪ್ರದೇಶ ಕಳೆದೆರೆಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ‘ಹಿಮಮಳೆ’ಯಿಂದ ಸಂಪೂರ್ಣ ಸಂಪರ್ಕ ಕಡಿದುಕೊಂಡು ದ್ವೀಪ ಪ್ರದೇಶದಂತಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹಾಲು, ಆಹಾರ ಮತ್ತು ಪತ್ರಿಕೆ ಸರಬರಾಜು ನಡೆಯುತ್ತಿಲ್ಲ. ಹಿಮಪಾತದಿಂದ ಜನ ಮನೆಯಲ್ಲೇ ಬಂಧಿಗಳಾಗಿದ್ದಾರೆ.

ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ಕಿನ್ನೌರ್ ನಗರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಶಿಮ್ಲಾದ ರಸ್ತೆಗಳಲ್ಲಿ 4 ಸೆಂ.ಮೀ.ನಷ್ಟು ಹಿಮ ಸುರಿದಿದೆ. ಕುಫ್ರಿ, ಫಾಗು, ನರ್ಕಂದಾದಲ್ಲಿ 45-45 ಸೆಂ.ಮೀ.ನಷ್ಟು ಹಿಮ ಸುರಿದಿದೆ. ವಿದ್ಯುತ್ ಮತ್ತು ನೀರು ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದ್ದು, ನೂರಾರು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಕುಲು-ಮನಾಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದೇ ಸಮನೇ ಹಿಮ ಸುರಿಯುತ್ತಿರುವುದರಿಂದ ತಾತ್ಕಾಲಿಕ ರಸ್ತೆಯನ್ನು ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಈ ಮಾರ್ಗದಲ್ಲಿ ಸುಮಾರು 30 ಸರಕಾರ ಬಸ್ ಗಳು ಮಂಜಿನಲ್ಲಿ ಸಿಕ್ಕಿಕೊಂಡಿದೆ. ರೋಹತಂಗ್ ಪಾಸ್ ನಲ್ಲಿ 60 ಸೆಂ.ಮೀ.ನಷ್ಟು ಹಿಮ ಬಿದ್ದಿದ್ದು, ಶೀತಗಾಳಿ ಮುಂದುವರಿದಿದೆ.

Leave a Reply

comments

Related Articles

error: