ಮೈಸೂರು

ಹಿಂದೂಸ್ತಾನ ಸಂಗೀತ ಕಛೇರಿ : ಕಾರ್ಯಾಗಾರ .23.

ಮೈಸೂರು,ಡಿ.18 : ನಗರದ ಗಾಯನ ಸಭಾ ವತಿಯಿಂದ ಹಿಂದುಸ್ಥಾನಿ ಸಂಗೀತ ಕಾರ್ಯಾಗಾರ ಮತ್ತು ಗಾಯನ ಕಾರ್ಯಕ್ರಮವನ್ನು ಡಿ.23ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ನಾದಬ್ರಹ್ಮ ಸಂಗೀತ ಸಭಾದ ಕಿರು ಸಭಾಂಗಣದಲ್ಲಿ ಪಂಡಿತ್ ರವಿಕಿರಣ್ ಮಣಿಪಾಲ ಅವರಿಂದ ‘ಹಿಂದೂಸ್ತಾನಿ ಸಂಗೀತದಲ್ಲಿ ಧ್ವನಿ ಸಂಸ್ಕೃತಿ’ ವಿಷಯವಾಗಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.

ನಂತರ ಅಂದು ಸಂಜೆ 5.30ಕ್ಕೆ ಸಂಗೀತ ಕಛೇರಿಯನ್ನು ಎಂ.ಎಲ್.ಕೃಷ್ಣಸ್ವಾಮಿ ಅವರ ನಿವಾಸ, ಮೀನಾಕ್ಷಿ 12/ಎ, 1ನೇ ಮುಖ್ಯ ರಸ್ತೆ, 4ನೇ ಹಂತ, ಟಿ.ಕೆ.ಲೇಔಟ್, ಕಾಮಾಕ್ಷಿ ಆಸ್ಪತ್ರೆ ಹತ್ತಿರ ಇಲ್ಲಿ ಏರ್ಪಡಿಸಲಾಗಿದೆ.

ಭೀಮಶಂಕರ ಬಿದನೂರು ತಬಲದಲ್ಲಿ, ಚೈತನ್ಯ ಭಟ್ ಅವರು ಹಾರ್ಮೋನಿಯಂ ನಲ್ಲಿ ಸಾಥ್ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: