ಸುದ್ದಿ ಸಂಕ್ಷಿಪ್ತ

ಅಸ್ತಮಾ ಹಾಗೂ ಲಿವರ್ ತಪಾಸಣಾ ಶಿಬಿರ ನಾಳೆ

ಮೈಸೂರು,ಡಿ.18 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಾಳೆ (19)ರಂದು ಅಸ್ತಮಾ, ಉಸಿರಾಟದ ತೊಂದರೆ ಹಾಗೂ ಲಿವರ್ ಮತ್ತು ಪ್ಯಾನ್ ಕ್ರಿಯಾಸ್ ಕ್ಲಿನಿಕ್ ಅನ್ನು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಸ್ತಮಾ ಮತ್ತು ಮಕ್ಕಳ ಉಸಿರಾಟದ ತೊಂದರೆ ತಪಾಸಣೆಯನ್ನು ನಡೆಸಲಾಗುವುದು.

ಮಧ್ಯಾಹ್ಯ 12 ರಿಂದ 2 ಗಂಟೆಯವರೆಗೆ ಲಿವರ್ ಮತ್ತು ಪ್ಯಾನ್ ಕ್ರಿಯಾಸ್ ಕ್ಲಿನಿಕ್ ಅನ್ನು ನಡೆಸಲಾಗುವುದು. ವಿವರಗಳಿಗೆ ಮೊ.ಸಂ.95380 52378 ಅನ್ನು ಸಂಪರ್ಕಿಸಬಹುದೆಂದು ಮಾರುಕಟ್ಟೆ ಮುಖ್ಯಸ್ಥ ಕೆ.ವಿ.ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: