ಪ್ರಮುಖ ಸುದ್ದಿಮೈಸೂರು

‘ವಿಷ ಪ್ರಸಾದ’ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ : ಜಮಾತೆ ಇಸ್ಲಾಮೀ ಹಿಂದ್ ಒತ್ತಾಯ

ಮೈಸೂರು,ಡಿ.18 : ಚಾಮರಾಜನಗರದ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಾಲಯದ ವಿಷ ಪ್ರಸಾದದಿಂದ ನಲುಗಿದ ರೋಗಿಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ನ ಮೈಸೂರು ಘಟಕವು ಸಹಾಯ ಹಸ್ತ ನೀಡಿದೆ.

ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥರನ್ನು ಜಮಾಅತೆ ಇಸ್ಲಾಮೀ ಹಿಂದ್ ನ ಪದಾಧಿಕಾರಿಗಳು ಬೇಟಿ ಮಾಡಿ ಹಣ್ಣು ಹಂಪಲು ವಿತರಿಸಿದ್ದಾರೆ.

ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಸಂಸ್ಥೆಯ ಪದಾಧಿಕಾರಿಗಳು ದೇವಾಲಯದ ಒಳಗಿನ ಚಟುವಟಿಕೆಗಳಿಗೂ ಭಕ್ತರಿಗೂ ಸಂಬಂಧವಿಲ್ಲ, ಭಕ್ತರು ಅಮಾಯಕರು, ಇವರ ಮೇಲೆ ಹಗೆ ತೀರಿಸಬಹುದಾದ ವಾತಾವರಣ ನಿರ್ಮಾಣವಾಗಿರುವುದು ಅಪಾಯಕಾರಿ ಬೆಳವಣಿಗೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ನಂಬಿಕೆಯ ಪವಿತ್ರ ಸ್ಥಳವಾದ ದೇವಾಲಯದಲ್ಲಿಯೂ ಭಯದ ವಾತಾವರಣ ಸೃಷ್ಠಿಯಾಗಿದ್ದು ಇಂತಹ ಅಮಾನವೀಯ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಸಂಸ್ಥೆಯ ಸ್ಥಾನೀಯ ಅಧ್ಯಕ್ಷ ಮುನವ್ವರ್ ಪಾಷಾ ಆಗ್ರಹಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: