ಮೈಸೂರು

ವಿಶೇಷ ಬಹುಮಾನ : ರೈತರಿಂದ ಅರ್ಜಿ ಆಹ್ವಾನ

ಸುಂದರಮ್ಮ ದುಗ್ಗಹಟ್ಟಿ ವೀರಭದ್ರಪ್ಪ ಪ್ರತಿಷ್ಠಾನ ಪ್ರಶಸ್ತಿ

ಮೈಸೂರು,ಡಿ.18 : ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಯಳಂದೂರು ತಾಲ್ಲೂಕಿನ ದುಗ್ಗಹಟ್ಟಿ ಗ್ರಾಮದ ಸುಂದರಮ್ಮ ದುಗ್ಗಹಟ್ಟಿ ವೀರಭದ್ರಪ್ಪ ಪ್ರತಿಷ್ಠಾನದ ವತಿಯಿಂದ ರೈತರಿಗೆ ವಿಶೇಷ ನಗದು ಬಹುಮಾನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ನಂಜನಗೂಡು ತಾಲ್ಲೂಕಿನಲ್ಲಿ ಭತ್ತದ ಬೇಸಾಯದಲ್ಲಿ, ಯಳಂದೂರು ತಾಲ್ಲೂಕಿನಲ್ಲಿ ಬಾಳೆ ಹಾಗೂ ಚಾಮರಾಜನಗರ ತಾಲ್ಲೂಕು ಕಲ್ಲಂಗಡಿ/ಟೊಮ್ಯಾಟೊ, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ತರಕಾರಿ ಬೆಳೆಯಲ್ಲಿ ಗರಿಷ್ಠ ಇಳುವರಿ ಪಡೆದ ಒಬ್ಬ ರೈತ/ರೈತ ಮಹಿಳೆಯನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಗುವುದು.

ಬಹುಮಾನವನ್ನು ಫೆ.1 ರಿಂದ 6ರವರೆಗೆ ನಡೆಯುವ ಸುತ್ತೂರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ನೀಡಲಿದ್ದು, ಆಸಕ್ತಿಯುಳ್ಳ ರೈತ ಬಾಂಧವರು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ/ ತೋಟಗಾರಿಕೆ ಇಲಾಖೆಯಲ್ಲಿ ರೂ.25 ಗಳನ್ನು ಪಾವತಿ ಮಾಡಿ 2019ರ ಜ.10ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿವರಗಳಿಗೆ ದೂ.ಸಂ.0821 232218, 94489 78836  ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: