ದೇಶಪ್ರಮುಖ ಸುದ್ದಿ

ಪ್ರಿಯಾಂಕಾ ಪತಿ ನಿಕ್ ಜೋನಾಸ್ ತೊಟ್ಟಿದ್ದ ಶೇರ್ವಾನಿ ರೆಡಿ ಮಾಡಿದ್ದು ಹೇಗೆ? ನೀವೇ ನೋಡಿ!

ಮುಂಬೈ (ಡಿ.18): ಕೆಲ ದಿನಗಳ ಹಿಂದೆ ವಿವಾಹ‌ ಬಂಧನದಲ್ಲಿ‌ ಸಿಲುಕಿದ ಪ್ರಿಯಾಂಕಾ ಚೋಪ್ರಾ ಲೆಹಂಗಾ ಸಿದ್ಧಪಡಿಸಿದ ವಿಡಿಯೊ ಬಳಿಕ ಇದೀಗ ನಿಕ್ ಜೋನಾಸ್ ಶೇರ್ವಾನಿ ಮೇಕಿಂಗ್ ವಿಡಿಯೊ‌ ವೈರಲ್ ಆಗಿದೆ.

ಪ್ರಿಯಾಂಕಾಗೆ ಲೆಹಂಗಾ ಸಿದ್ಧಪಡಿಸಿದ್ದ ಡಿಸೈನರ್ ಸಭ್ಯಸಾಚಿ ಮುಖರ್ಜಿ,‌ ಮದುವೆಯಾದ ಮರುದಿನವೇ ಪ್ರಿಯಾಂಕಾ‌ ಲೆಹಂಗಾ ಸಿದ್ಧಪಡಿಸಿದ ವಿಡಿಯೊ ಬಿಡುಗಡೆಗೊಳಿಸಿದ್ದರು.‌ ಇದೀಗ ನಿಕ್ ಅವರ ಶೆರ್ವಾನಿ ಮೇಕಿಂಗ್‌ ವಿಡಿಯೊವನ್ನು ‌ಇನ್’ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

ನಿಕ್‌ ಅವರ ಶೆರ್ವಾನಿಯನ್ನು ಮುರ್ಶಿದಾಬಾದ್ ರೇಷ್ಮೆಯಿಂದ ತಯಾರಿಸಿದ್ದು, ಗೋಲ್ಡನ್ ಬಟನ್‌ನಲ್ಲಿ ಹುಲಿಯ ಗುರುತಿದೆ. ಜಪಾನ್ ಮಾದರಿಯಲ್ಲಿ ಮುತ್ತುಗಳನ್ನು ಜೋಡಿಸಲಾಗಿದೆ ಎಂದು‌ ವಿಡಿಯೊದಲ್ಲಿ ತಿಳಿಸಿದ್ದಾರೆ. ಇನ್ನು‌ ಶೆರ್ವಾನಿಯೊಂದಿಗೆ‌ ಕತ್ತಿಯನ್ನು‌ ಹಿಡಿದುಕೊಳ್ಳಲು ನಿಕ್ ಉತ್ಸುಕರಾಗಿದ್ದರು ಎಂದಿರುವ‌ ಸಭ್ಯಸಾಚಿ, ಪ್ರತಿ ಹಂತವನ್ನು ವಿವರಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದೆ. (ಎನ್.ಬಿ)

Leave a Reply

comments

Related Articles

error: