ಮೈಸೂರು

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಮೈಸೂರು,ಡಿ.19:- ಮೈಸೂರು ನಗರದ ಸಿಸಿಬಿ ಪೊಲೀಸರು ನಿನ್ನೆ ಲಷ್ಕರ್ ಮೊಹಲ್ಲಾದ 23ನೇ ವೆಸ್ಟ್ ಅಶೋಕ ರಸ್ತೆ ಮತ್ತು ಎರೆಕಟ್ಟೆ ಬೀದಿ ಸೇರುವ ಜಂಕ್ಷನ್ ನಲ್ಲಿ ನಿಂತುಕೊಂಡು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಾಂತಿನಗರ ದರ್ಗಾ ಹತ್ತರಿ  ನಿವಾಸಿ ಪೇಂಟ್ ಕೆಲಸ ಮಾಡುವ ಮೆಹಬೂಬ್ ಷರೀಫ್ ಬಿನ್ ಅಮೀರ್ ಷರೀಫ್(21), ಸತ್ಯನಗರದ ದೊಡ್ಡಮೋರಿ ಹತ್ತಿರದ ನಿವಾಸಿ ಎಲೆಕ್ಟ್ರಿಕ್ ಕೆಲಸ ಮಾಡುವ ಜಾವೀದ್ ಬಿನ್ ಮಹಮದ್ ಹಫೀಜ್(20)ಎಂದು ಗುರುತಿಸಲಾಗಿದೆ. ಇವರನ್ನು ವಶಕ್ಕೆ ಪಡೆದು ಇವರ ಬಳಿಯಿದ್ದ 350ಗ್ರಾಂ ಗಾಂಜಾ ಹಾಗೂ 1250ರೂ.ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಸಿಬಿಯ ಉಸ್ತುವಾರಿ ಎಸಿಪಿ ಸಿ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಪೊಲೀಸ್ ಇನ್ಸಪೆಕ್ಟರ್ ಮಲ್ಲೇಶ್ ಎ ಮತ್ತು ಸಿಬ್ಬಂದಿಯವರಾದ ಎಎಸ್ ಐ ಆರ್.ರಾಜು, ಜೋಸೆಫ್ ನರೋನ್ಹ, ಡಿ.ಶ್ರೀನಿವಾಸ್ ಪ್ರಸಾದ್, ಪುರುಷೋತ್ತಮ ಅರುಣ್ ಕುಮಾರ್, ರಾಜಶ್ರೀ ಚಾಲವಾದಿ,ಚಾಲಕರುಗಳಾದ ಧನಂಜಯ, ಶ್ರೀನಿವಾಸ್ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: