ಮೈಸೂರು

ಜೈವಿಕ ಇಂಧನ ಗಿಡಗಳನ್ನು ಬೆಳೆಯುವ ಮೂಲಕ ಇಂಧನ ಉತ್ಪಾದಿಸಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು : ಎಸ್.ಶ್ಯಾಮಸುಂದರ್

ಮೈಸೂರು,ಡಿ.19:- ರೈತರು ಕೇವಲ ಆಹಾರಬೆಳೆಗಳನ್ನಷ್ಟೇ ಬೆಳೆಯದೇ ಜೈವಿಕ ಇಂಧನ ಗಿಡಗಳನ್ನು ಬೆಳೆಯುವ ಮೂಲಕ ಇಂಧನ ತಯಾರಿಸಬಹುದಲ್ಲದೇ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂದು ಎನ್ ಐ ಇ ನಿರ್ದೇಶಕ ಎಸ್.ಶ್ಯಾಮಸುಂದರ್ ತಿಳಿಸಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು, ಜಿಲ್ಲಾ ಪಂಚಾಯತ್ ಮೈಸೂರು ಸಾಮಾಜಿಕ ಅರಣ್ಯ ವಿಭಾಗ ಮೈಸೂರು ಮತ್ತು ಜಿಲ್ಲಾ ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಎನ್ ಐಇ ಕಾಲೇಜು ಮೈಸೂರು ಇವರ ಸಹಯೋಗದೊಂದಿಗೆ ಇಂದು ಎನ್ ಐ ಇ ಕಾಲೇಜಿನ ವಜ್ರಮಹೋತ್ಸವ ಒಳಾಂಗಣ ಸಭಾಂಗಣದಲ್ಲಿಂದು ನಡೆದ ವಿಶ್ವ ಜೈವಿಕ ಇಂಧನ ದಿನಾಚರಣೆ ಹಾಗೂ ಜೈವಿಕ ಇಂಧನ ಜಿಲ್ಲಾ ಮಟ್ಟದ ಕಾರ್ಯಾಗಾರ-2018 ರಲ್ಲಿ ಪಾಲ್ಗೊಂಡು ಮಾತನಾಡಿದರು. ನಾವು ಇಂಧನವನ್ನು ಹೊರದೇಶಗಳಿಂದ ಹೆಚ್ಚಿನ ಹಣ ಕೊಟ್ಟು ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿದೆ. ಕೊಲ್ಲಿ ರಾಷ್ಟ್ರಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದು ಈ ಇಂಧನದಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ಇಂಗಾಲಾಮ್ಲ, ಗಂಧಕದಿಂದ ಹೊಗೆ ಬರುತ್ತಿದೆ.ಇದರಿಂದ ಪರಿಸರ ಕೆಡುತ್ತದೆ. ನಮ್ಮಲ್ಲಿ ಸಾಕಷ್ಟು ಜನ ಹಳ್ಳಿಯವರೇ ಇದ್ದಾರೆ. ಸಾಕಷ್ಟು ಭೂಮಿ ಕೂಡ ಇದೆ. ನಮ್ಮ ದೇಶದಲ್ಲಿ ನಾವೇ ಇಂಧನ ತಯಾರಿಸಬಹುದು. ಗ್ರಾಮದಲ್ಲಿ ಕೂಡ ತಯಾರಿಸಬಹುದು. ಬರುವ ಕಚ್ಚಾತೈಲದ ಆಮದು ಕಡಿಮೆ ಮಾಡಬಹುದು. ಜೈವಿಕ ಇಂಧನ ಗಿಡ ಬೆಳೆಯಬಹುದು.ಇದರಿಂದ ದೇಶಕ್ಕೆ ಇಂಧನದ ಸ್ವಾವಲಂಬನೆ ಬರಲಿದೆ. ವಾತಾವರಣದಲ್ಲಿ ಮಾಲಿನ್ಯ ಕಡಿಮೆ ಆಗಲಿದೆ. ಈ ಕುರಿತು ತಿಳಿಸುವ ಸಲುವಾಗಿ ರಾಜ್ಯ ಜೈವಿಕ ಮಂಡಳಿ ಸ್ಥಾಪನೆ ಮಾಡಿದೆ ಎಂದರು.   ಪ್ರತಿ ಜಿಲ್ಲೆಯಲ್ಲಿಯೂ ಜೈವಿಕ ಇಂಧನ ಮಾಹಿತಿ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಮಾಡಿದೆ. ಅರಣ್ಯ ಇಲಾಖೆ,ಮೈಸೂರು ಜಿ.ಪಂ.ಮಟ್ಟದಲ್ಲಿ ಹೆಚ್ಚಿನ ಅರಿವು ಮೂಡಿಸಲು ಜೈವಿಕ ಜಿಲ್ಲಾ ಮಾಹಿತಿ ಪ್ರಾತ್ಯಕ್ಷಿಕಾ ಕೇಂದ್ರಮಾಡಿದೆ ಎಂದರು.

ಹೊಂಗೆ, ಬೇವಿನಿಂದ ಡೀಸೆಲ್ ಗೆ ಪರ್ಯಾಯವಾಗಿ ಇಂಧನ ತಯಾರಿಸಬಹುದು. ಪೆಟ್ರೋಲ್ ಗೆ ಬದಲಾಗಿ ಹಣ್ಣು ಮತ್ತು ಕಬ್ಬಿನ ರಸದಿಂದ  ಎಥನೋಲ್ ಸಿದ್ಧಪಡಿಸಿ ಉಪಯೋಗಿಸಬಹುದು. ಬೆಂಗಳೂರಿನ ಕಂಪನಿಯೊಂದರಲ್ಲೇ 20,000ಲೀ.ಡೀಸೆಲ್ ರೆಡಿಯಾಗತ್ತೆ. ರೈತರು ಆಹಾರ ಬೆಳೆಯ ಜೊಎ ಜೊತೆ ಜೈವಿಕ ಗಿಡ ಬೆಳೆದರೆ ಸ್ವಯಂ ಉದ್ಯೋಗಿಗಳೂ ಆಗಬಹುದು. ಅರಿವು ಮೂಡಿಸುವ ಕೆಲಸವಾಗಬೇಕಷ್ಟೇ ಎಂದರು.

ಜಿ.ಪಂ ಉಪಾಧ್ಯಕ್ಷ ಜಿ.ನಟರಾಜು ಮಾತನಾಡಿ ಹೋಬಳಿ ಮಟ್ಟದಲ್ಲಿಯೂ ಕಾರ್ಯಕ್ರಮ ಆಯೋಜಿಸಿಕೊಂಡರೆ ರೈತರು ಕೂಡ ಜೈವಿಕ ಬೆಳೆಬೆಳೆದು ಆರ್ಥಿಕವಾಗಿ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನಾ ನಜೀರ್ ಅಹ್ಮದ್, ಹುಲಿಯೋಜನೆಯ ಕ್ಷೇತ್ರ ನಿರ್ದೇಶಕ ಜಗತ್ ರಾಮ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೇಂಕಟೇಸನ್, ಎನ್ ಐ ಇ ಕಾಲೇಜು ಪ್ರಾಂಶುಪಾಲ ಡಾ.ಜಿ.ರವಿ, ಕೃಷಿ ವಿವಿಯ ಪ್ರೊ.ಡಾ.ಕೆ.ಬಾಲಕೃಷ್ಣೇಗೌಡ, ಉಪಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: