ಪ್ರಮುಖ ಸುದ್ದಿಮೈಸೂರು

ರಾತ್ರಿ 8 ಗಂಟೆ ನಂತರ ಬಂದ್ ಆಗಲಿವೆ ನಗರದ ಪೆಟ್ರೋಲ್ ಬಂಕ್ ಗಳು

ಹಲ್ಲೆಗಳಿಗೆ ಹೆದರಿದ ಪೆಟ್ರೋಲ್ ಬಂಕ್ ಮಾಲೀಕರ ಘೋಷಣೆ : ಸೂಕ್ತ ಭದ್ರತೆಗೆ ಒತ್ತಾಯ

ಮೈಸೂರು,ಡಿ.19 : ರಾತ್ರಿ 8 ಗಂಟೆಯ ನಂತರ ನಗರದಲ್ಲಿ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಫೆಡರೇಷನ್ ಆಫ್ ಇಂಡಿಯಾ ಪೆಟ್ರೋಲಿಯಂ ಟ್ರೇಡರ್ಸ್ ನೀಡಿದೆ.

ಸಂಘದ ಅಧ್ಯಕ್ಷ ಬಸವೇಗೌಡ ಸುದ್ದಿಗೋಷ್ಠಿಯಲ್ಲಿಂದು ಈ ಎಚ್ಚರಿಕೆ ನೀಡಿದ್ದು, ಸಮಾಜಘಾತುಕ ಕಿಡಿಗೇಡಿಗಳಿಂದ ಪೆಟ್ರೋಲ್ ಬಂಕ್ ಗಳ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿದ್ದು ತಮ್ಮ ಜೀವಕ್ಕೆ ಭದ್ರತೆ ಇಲ್ಲದ ಕಾರಣ ಇನ್ನೂ ಮುಂದೆ ಸಂಜೆ 8 ಗಂಟೆಗೆ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.

ಘಟನೆ ವಿವರ : ಡಿ.15ರ ಮಧ್ಯ ರಾತ್ರಿ ಸುಮಾರು 12.45ಕ್ಕೆ ಹಿನಕಲ್ ಬಳಿಯ ಅನ್ನಪೂರ್ಣ ಸರ್ವಿಸ್ ಸ್ಟೇಷನ್ ನ ಸಿಬ್ಬಂದಿ ಮತ್ತು ಮಾಲೀಕರ ಮೇಲೆ ಕಿಡಿಗೇಡಿಗಳ ತಂಡವೊಂದು ಹಲ್ಲೆ ನಡೆಸಿದ್ದು, ಬಂಕ್ ಮಾಲೀಕ ವಿನೋದ್ ಅವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆಯಾಗಿದ್ದು ಅವರು ಜೀವ ಉಳಿದಿರುವುದೇ ಹೆಚ್ಚು, ಅಲ್ಲದೆ ಸ್ಥಳದಲ್ಲಿದ್ದ ಸಿಸಿ ಟಿವಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ತಿಳಿಸಿದರು.

ಹೂಟಗಳ್ಳಿಯ ಹೇಮಂತ್ ಎಂಬುವವರು ಅಂದು ರಾತ್ರಿ ಪೆಟ್ರೋಲ್ ಭರಿಸಲು ಆಗಮಿಸಿದ್ದು, ಬಂಕ್ ವ್ಯಾಪ್ತಿಯಲ್ಲಿ ಸಿಗರೇಟ್ ಸೇದಲು ಮುಂದಾದರು, (ಆ ಸಮಯದಲ್ಲಿ 1200 ಲೀಟರ್ ಪೆಟ್ರೋಲ್ ಅನ್ ಲೊಡ್ ನಡೆಯುತ್ತಿತ್ತು) ಅದನ್ನು ತಡೆದು ಹೊರ ಕಳಿಸಲಾಯಿತು, ಇದರಿಂದ ಕೂಪಿತರಾದ ಅವರು, ತಂಡವೊಂದನ್ನು ಕಟ್ಟಿಕೊಂಡು ಬಂದು ತಮ್ಮ ಮೇಲೆ ಏಕಾ ಏಕಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ, ಹಲ್ಲೆಯಿಂದ ಕಣ್ಣು, ತಲೆ, ಸೇರಿದಂತೆ ದೇಹದ ಇತರೆ ಭಾಗಗಳಿಗೆ ಗಾಯವಾಗಿದೆ. ಈ ಘಟನೆಯಿಂದ ಭಯ ಮೂಡಿದೆ ಎಂದು ಹಲ್ಲೆಗೊಳಗಾದ ವಿನೋದ್ ಅವರು ಅಲವತ್ತು ಕೊಂಡರು.

ಉಪಾಧ್ಯಕ್ಷ ನಾರಾಯಣಸ್ವಾಮಿ ಅವರು ಮಾತನಾಡಿ, ಅರೋಪಿಗಳಿಗೆ ಪ್ರಭಾವಿಗಳ ಶ್ರೀರಕ್ಷೆಯಿದೆ, ಆರೋಪಿಗಳಾದ ಆದರ್ಶ್, ಹರೀಶ್, ಅರುಣ್, ಮಧು, ಅಭಿಷೇಕ್, ಯೋಗೇಶ್, ಅಭಿಲಾಷ್ ಇವರುಗಳ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 143, 149, 323,324 ಮೇಲೆ ದೂರು ದಾಖಲಾಗಿದೆ, ಇದೊಂದು ಜಾಮೀನು ರಹಿತ ಪ್ರಕರಣವಾಗಿದ್ದರು ಪ್ರಭಾವಿಗಳ ಕೃಪಾಕಟಾಕ್ಷದಿಂದ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಆಕ್ರೋಶ ಪಡಿಸಿದ್ದು ಇಂತಹ ದುರ್ಘಟನೆಗಳು ಬಂಕ್ ಗಳಲ್ಲಿ ಮೇಲೆ ಪದೇ ಪದೇ ನಡೆಯುತ್ತಿದೆ ಇದರಿಂದ ಭಯದ ವಾತಾವರಣ ಮೂಡಿದೆ ಎಂದು ತಿಳಿಸಿದರು.

ಹಲ್ಲೆಗೊಳಗಾದ ವಿನೋದ್

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಉದ್ಯಮಕ್ಕೆ ಹಾಗೂ ತಮಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಜಿಲ್ಲಾ ಪೊಲೀಸ್ ಆಯುಕ್ತರಾದ ಡಾ.ಸುಬ್ರಮಣ್ಯೇಶ್ವರ ರಾವ್ ಅವರಿಗೆ ಸಂಘದಿಂದ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಫೆಡರೇಷನ್ ನ ಎಸ್.ಆರ್.ಪಾಟೀಲ್, ಹಲ್ಲೆಗೊಳಗಾದ ವಿನೋದ್ ಅವರ ತಂದೆ ಶ್ರೀಧರ್ ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: