ಪ್ರಮುಖ ಸುದ್ದಿಮೈಸೂರು

ಡಿ.21ರಂದು ರೈತ ಹೋರಾಟಗಾರ ಎನ್.ಡಿ.ಸುಂದರೇಶ್ ಅವರು ನೆನಪಿನ ದಿನಾಚರಣೆ

ಪ್ರಾಣಾಂತಿಕ ಕ್ರಿಮಿನಾಶಕಗಳನ್ನು ನಿಷೇಧಿಸಲು ಒತ್ತಾಯ

ಮೈಸೂರು,ಡಿ.19 : ಶಿವಮೊಗ್ಗದ ಮಹಾತ್ಮಗಾಂಧಿ  ಉದ್ಯಾನವನದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ಡಿ.21ರಂದು ರೈತ ಹೋರಾಟಗಾರ ಎನ್.ಡಿ.ಸುಂದರೇಶ್ ಅವರ 26ನೇ ನೆನಪಿನ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದರು.

ಅವರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ಬೆಳಗ್ಗೆ 10.45ಕ್ಕೆ ಕಾರ್ಯಕ್ರಮ ಆರಂಭವಾಗುತ್ತಿದ್ದು ರಾಜ್ಯ ರೈತಸಂಘದ ಸಂಸ್ಥಾಪಕ ಸುರೇಶ್ ಬಾಬು ಗಜಪತಿ ಪಾಟೀಲ್ ಉದ್ಘಾಟಿಸುವರು, ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಅಧ್ಯಕ್ಷತೆ. ತಾವು ಪ್ರಸ್ತಾವಿಕವಾಗಿ ಮಾತನಾಡುವುದಾಗಿ ತಿಳಿಸಿದರು.

ಕ.ರಾ.ರೈ.ಸಂ ದ ಗೌರವಾಧ್ಯಕ್ಷ ಚಾಮರಸಮಾಲೀ ಪಾಟೀಲ್, ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ರಾಜ್ಯ ಉಪಾಧ್ಯಕ್ಷ ಎಂ.ರಾಮು, ಮುಚುಳಾಂಬಿ ಕಾರ್ಯಾಧ್ಯಕ್ಷ ಕಲ್ಯಾಣರಾವ್, ರಾಜ್ಯ ಉಪಾಧ್ಯಕ್ಷ ರಾಮಸ್ವಾಮಿ ಸೇರಿದಂತೆ ಸುನಿತಾ ಪುಟ್ಟಣ್ಣಯ್ಯ, ಚುಕ್ಕಿ ನಂಜುಂಡಸ್ವಾಮಿ, ಶಾಮವಾನಿ, ಎನ್.ಎಸ್.ಸುದಾಂಶು ಮತ್ತಿತರರು ಇರಲಿದ್ದಾರೆ.

‘ಮಲೆನಾಡಿನ ರೈತರ ಬದುಕಿನ ಆತಂಕಗಳು ಮತ್ತು ನಿವಾರಣೆಗಳು ವಿಷಯವಾಗಿ ನಡೆಯುವ ಸಂವಾದದಲ್ಲಿ ಪ್ರಗತಿಪರ ಚಿಂತಕ ಶಿವಸುಂದರ್, ಕಲ್ಕುಳಿ ವಿಠ್ಠಲ ಹೆಗ್ಗಡೆ, ಬಿ.ಆರ್.ಜಯಂತ್, ರಾಜೇಂದ್ರ, ಕೂಡ್ಲು ವೆಂಕಟೇಶ್, ನೆಂಪೆ ದೇವರಾಜ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹನೂರು ತಾಲ್ಲೂಕಿನ ಸಾಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದದಿಂದ ಸಂಭವಿಸಿರುವ ಸಾವು ನೋವಿಗೆ ತೀವ್ರ ಆತಂಕ ವ್ಯಕ್ತಪಡಿಸಿ, ಪ್ರಾಣಾಂತಿಕ ಕ್ರಿಮಿನಾಶಕಗಳನ್ನು ವಿದೇಶಗಳಲ್ಲಿ ಮಾಡಿರುವಂತೆ ದೇಶದಲ್ಲಿಯೂ ನಿಷೇಧಿಸಬೇಕಿದೆ, ಈ ಬಗ್ಗೆ ಮನವರಿಕೆಯ ಹಲವಾರು ಹೋರಾಟಗಳು ನಡೆದಿದ್ದರು ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ರೈತ ಮುಖಂಡರಾದ ಎಣ್ಣೆಹೊಳೆ ಕೊಪ್ಪಲಿನ, ವೈ.ಪಿ.ಮಂಜುನಾಥ್, ರಘು, ಕೆನ್ನಾಳು ನಾಗರಾಜು, ಕೆಂಪುರಾಜು, ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: