ಸುದ್ದಿ ಸಂಕ್ಷಿಪ್ತ

ಪ್ರಶಸ್ತಿ ನೀಡಲು ಪ್ರಸ್ತಾವನೆ ಆಹ್ವಾನ

ಮೈಸೂರು,ಡಿ.19-ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ಅಸ್ಪೃಶ್ಯತೆ ನಿವಾರಣೆ ಮಾಡಲು ಹಾಗೂ ದೌರ್ಜನ್ಯ ಅಪರಾಧಗಳ ನಿಯಂತ್ರಣದಲ್ಲಿ ಅತ್ಯುತ್ತಮ ಸೇವೆ ಸಲ್ಲಸಿದ ವ್ಯಕ್ತಿ/ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲು ಪ್ರಸ್ತಾವನೆ/ನಾಮನಿರ್ದೇಶನವನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿಗಾಗಿ ನಿಗಧಿತ ಅರ್ಜಿ ನಮೂನೆ ಮತ್ತು ಅರ್ಜಿ ಸಲ್ಲಿಸಲು ಅಗತ್ಯಪಡಿಸಿರುವ ಅರ್ಹತೆ ಮತ್ತು ಇನ್ನಿತರೆ ಷರತ್ತುಗಳ ಬಗ್ಗೆ ಮಾರ್ಗಸೂಚಿಯನ್ನು ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಡಾ.ಬಾಬು ಜಗಜೀವನರಾಂ ಭವನ ಕಟ್ಟಡ, ಆದಿಪಂಪ ರಸ್ತೆ ಒಂಟಿಕೊಪ್ಪಲು ಪೂರ್ವ ಬಡಾವಣೆ, ಮೈಸೂರು ಇಲ್ಲಿ ಪಡೆಯಬಹುದು.

ಮೈಸೂರು ಜಿಲ್ಲೆಗೆ ಒಳಪಟ್ಟ ತಾಲ್ಲೂಕಿನ ಅರ್ಹ ವ್ಯಕ್ತಿಗಳು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ  ಇಲ್ಲಿಗೆ ಭೇಟಿ ಮಾಡಿ ಸೂಕ್ತ ದಾಖಲಾತಿಗಳೊಂದಿಗೆ ಮಾಹಿತಿಯನ್ನು ಡಿ.24 ರೊಳಗೆ ಸಲ್ಲಿಸುವುದುಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2344561 ಅನ್ನು ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: