ಮೈಸೂರು

ಡಾ.ಎಸ್.ರಾಧಾಕೃಷ್ಣನ್ ಪ್ರತಿಮೆ ಅನಾವರಣ

ಮೈಸೂರಿನ ಸರಸ್ವತಿಪುರಂನಲ್ಲಿರುವ ಸರ್ಕಾರಿ ಮುದ್ರಣಾಲಯದ ಎದುರು ಇರುವ ರಾಧಾಕೃಷ್ಣಭವನದಲ್ಲಿ ಭಾನುವಾರ ಮೈಸೂರು ವಿಶ್ವವಿದ್ಯಾನಿಲಯದ ಡಾ.ಎಸ್.ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದ ವತಿಯಿಂದ ಡಾ.ಎಸ್.ರಾಧಾಕೃಷ್ಣನ್ ಪ್ರತಿಮೆ ಅನಾವರಣ ಹಾಗೂ ಉಪನ್ಯಾಸ ಮಾಲಿಕೆ ನಡೆಯಿತು.

ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಉದ್ಘಾಟಿದರು. ಬಳಿಕ ಮಾತನಾಡಿದ ಅವರು  ಶಿಕ್ಷಣ ಪ್ರತಿಯೊಬ್ಬರ ಚಾರಿತ್ರ್ಯವನ್ನು ರೂಪಿಸುತ್ತದೆ ಎಂದರಲ್ಲದೇ, ರಾಧಾಕೃಷ್ಣರ ತತ್ತ್ವಾದರ್ಶ ಗಳು ಪ್ರತಿಯೊಬ್ಬರನ್ನೂ ತಲುಪುವಂತಾಗಬೇಕು ಎಂದು ತಿಳಿಸಿದರು

ಮೈಸೂರು ವಿವಿ ಸಂಜೆ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಅನಂತರಾಮು  ಉಪನ್ಯಾಸ ಮಾಲಿಕೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಂಯೋಜಕ ಡಾ.ಸಿ.ಪಿ.ರಾಮಶೇಷ, ಗಣಕವಿಜ್ಞಾನ ವಿಭಾಗ ಪ್ರೊ.ಜಿ.ಹೇಮಂತ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

Leave a Reply

comments

Related Articles

error: