ಪ್ರಮುಖ ಸುದ್ದಿ

ಮಡಿಕೇರಿ ಸಿಪಾಯಿ ಹುಚ್ಚ ವೆಂಕಟ್ ಚಿತ್ರೀಕರಣ ಶೀಘ್ರ 

ರಾಜ್ಯ(ಮಡಿಕೇರಿ) ಡಿ.19 :- ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳೊಂದಿಗೆ ಪ್ರೇಮ ಕಥೆಯನ್ನು ನಿರೂಪಿಸುವ ‘ಮಡಿಕೇರಿ ಸಿಪಾಯಿ ಹುಚ್ಚ ವೆಂಕಟ್’  ಚಿತ್ರ ನಿರ್ಮಾಣಕ್ಕೆ ತಯಾರಿ ನಡೆಸಿರುವುದಾಗಿ ನಟ, ನಿರ್ದೇಶಕ ಹುಚ್ಚ ವೆಂಕಟ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಲನಚಿತ್ರದಲ್ಲಿ ಸಿಪಾಯಿಯ ಪಾತ್ರವನ್ನು ತಾನು ನಿಭಾಯಿಸುತ್ತಿದ್ದು, ಕಾವೇರಿಯ ಕ್ಷೇತ್ರ ಭಾಗಮಂಡಲ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೂ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ ಎಂದರು. ಚಿತ್ರದ ಕ್ಲೈಮಾಕ್ಸ್ ಭಾಗವನ್ನು ಭಾರತ-ಪಾಕ್ ಗಡಿಯಲ್ಲಿ ಚಿತ್ರೀಕರಿಸುವುದಾಗಿ ತಿಳಿಸಿದರು.

ಸೈನಿಕ ಪರಂಪರೆಯ ಬಗ್ಗೆ ಗೌರವ ಮೂಡಿಸುವ ಚಲನಚಿತ್ರವನ್ನು ನಿರ್ಮಿಸಲಾಗುತ್ತದೆ. ಶೀಘ್ರದಲ್ಲಿಯೇ ಚಿತ್ರದ ಪ್ರೋಮೋ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ ಹುಚ್ಚ ವೆಂಕಟ್, ಕೊಡಗಿನ ಸಂಸ್ಕøತಿ, ಪರಂಪರೆ, ಇಲ್ಲಿನ ಜನರ ಸ್ನೇಹಪರತೆಗಳಿಗೆ ನಾನು ಪ್ರಭಾವಿತನಾಗಿದ್ದು, ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಚಿತ್ರದ ಕೆಲವು ಭಾಗಗಳ ಚಿತ್ರೀಕರಣಕ್ಕೆ ಮುಂದಾಗಿರುವುದಾಗಿ ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: