ಸುದ್ದಿ ಸಂಕ್ಷಿಪ್ತ

ಪ್ರೇಮಕ್ಕೆ ವಿರೋಧ: ಹಲ್ಲೆ

ತಂಗಿಯ ಪ್ರೀತಿಯನ್ನು ವಿರೋಧಿಸಿದ ಅಣ್ಣನ ಮೇಲೆ ಆಕೆಯ ಪ್ರಿಯಕರನ ಸ್ನೇಹಿತರು ಹಲ್ಲೆ ನಡೆಸಲು ಯತ್ನಿಸಿದ್ದು, ಬಿಡಿಸಲು ಬಂದ ಯುವಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಗಾಯಗೊಂಡಾತನನ್ನು ಅವಿನಾಶ್ ಎಂದು ಗುರುತಿಸಲಾಗಿದೆ. ಇದೀಗ ಆತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೈಸೂರಿನ ಕನಕಗಿರಿಯ ಗಣಪತಿ ದೇವಸ್ಥಾನದ ಬಳಿ ಹಲ್ಲೆ ಘಟನೆ ನಡೆದಿದ್ದು, ವಿದ್ಯಾರಣ್ಯಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

comments

Related Articles

error: