ಮೈಸೂರು

ಪೊಲೀಸರ ಒತ್ತಡ ನಿರ್ವಹಣೆಗಾಗಿ ಧ್ಯಾನ ಮತ್ತು ಯೋಗ

ಮೈಸೂರು ಸಿಎಆರ್ ನ ಕವಾಯತು ಮೈದಾನದಲ್ಲಿ ಭಾನುವಾರ ಒತ್ತಡ ನಿರ್ವಹಣೆಗಾಗಿ ಮೈಸೂರು ನಗರದ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಒತ್ತಡ ನಿರ್ವಹಣೆಗಾಗಿ ಧ್ಯಾನ ಮತ್ತು ಯೋಗವನ್ನು ಆಯೋಜಿಸಲಾಗಿತ್ತು.

ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್ ನ ಧ್ಯಾನಗುರು ಶ್ರೀಧರ್, ಚಂದ್ರಶೇಖರ್, ಧ್ಯಾನದ ಕುರಿತು ಕಾರ್ಯಕ್ರಮ ನೀಡಿದರು. ಹಿರಿಯ ಯೋಗಪಟು ನಾಗಭೂಷಣ್ ಮತ್ತು ಜಗದೀಶ್ ಯೋಗ ತರಬೇತಿಯನ್ನು ನೀಡಿದರು.

ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಉಪಪೊಲೀಸ್ ಆಯುಕ್ತ ಬಿ.ವಿ.ಕಿತ್ತೂರ್ ಸೇರಿದಂತೆ 300ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

comments

Related Articles

error: