ಮೈಸೂರು

ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ : ಡಾ.ಸುಬ್ರಹ್ಮಣ್ಯೇಶ್ವರರಾವ್

ಮೈಸೂರು ನಗರದಲ್ಲಿ 2016ನೇ ವರ್ಷದಲ್ಲಿ ಒಟ್ಟು 714 ರಸ್ತೆ ಅಪಘಾತ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 100 ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 106 ಮಂದಿ ಮೃತಪಟ್ಟಿದ್ದು, 614 ಸಾಧಾರಣ ರಸ್ತೆ ಅಪಘಾತ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 733ಜನ ಗಾಯಗೊಂಡಿದ್ದಾರೆ.

ಪ್ರಸ್ತುತ ವರ್ಷದಲ್ಲಿ ವರದಿಯಾಗಿರುವ ರಸ್ತೆ ಅಪಘಾತಗಳನ್ನು ಕಳೆದ ವರ್ಷ ವರದಿಯಾದ ರಸ್ತೆ ಅಪಘಾತಗಳಿಗೆ ಹೋಲಿಕೆ ಮಾಡಿದಾಗ ಶೇ.14.69ಭಾಗ  ಇಳಿಕೆಯಾಗಿದೆ. ಅದೇ ರೀತಿ ಮೃತಪಟ್ಟವರ ಹಾಗೂ ಗಾಯಗೊಂಡವರ ಸಂಖ್ಯೆ ಸಹ ಕಡಿಮೆಯಾಗಿದೆ.

ನಗರ ಸಂಚಾರ ವಿಭಾಗದ ಪೊಲೀಸರು ಸಂಚಾರ ನಿಯಮ  ಉಲ್ಲಂಘನೆಗಳನ್ನು  ಪತ್ತೆ ಮಾಡಲು ಆಧುನಿಕ ತಂತ್ರಜ್ಞಾನಗಳಾದ ಸಿಸಿಟಿವಿ, ಸ್ಪೀಡ್ ವಯೋಲೇಷನ್ ಕ್ಯಾಮರಾಗಳ ಅಳವಡಿಕೆ ಹಾಗೂ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರು ಉಲ್ಲಂಘನೆಗಳನ್ನು ಚಿತ್ರೀಕರಿಸಲು ಕ್ಯಾಮರಾಗಳನ್ನು ಉಪಯೋಗಿಸಿ ವಾಹನಗಳ ಮಾಲೀಕರುಗಳಿಗೆ ನೋಟೀಸ್ ಕಳುಹಿಸುವ ವಿನೂತನ ವಿಧಾನವನ್ನು ಅನುಸರಿಸಿ ಒಟ್ಟು 15,94,039ಸಂಚಾರ ನಿಯಮ  ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ 7,14,47,950ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಗೆ ಹೋಲಿಕೆ ಮಾಡಿದಾಗ 2016ನೇ ಸಾಲಿನಲ್ಲಿ ಅತಿಹೆಚ್ಚು ಸಂಚಾರ ನಿಯಮ  ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

ಮುಂದಿನ ದಿನಗಳಲ್ಲಿಯೂ ಸಹ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ ಸಂಚಾರ ಪೊಲೀಸರೊಂದಿಗೆ ಸಹಕರಿಸಿ ಮೈಸೂರು ನಗರವನ್ನು ರಸ್ತೆ ಅಪಘಾತ ಮುಕ್ತ ನಗರವನ್ನಾಗಿ ಮಾಡಲು ಕೈಜೋಡಿಸಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

Leave a Reply

comments

Related Articles

error: