ಮೈಸೂರು

ಫಾರ್ಮಸಿ ಸಪ್ತಾಹ ಆಚರಣೆ : ಸಪ್ತಾಹ

ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್ ಗಳ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಶಾಖೆ ಆಶ್ರಯದಲ್ಲಿ 55ನೇ ವರ್ಷದ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಪ್ತಾಹ ಆಚರಣೆಯ ಅಂಗವಾಗಿ ನಿವೃತ್ತ ಫಾರ್ಮಾಸಿಸ್ಟ್ ಗಳಾದ ಮುನೀಶ್ ಕುಮಾರ್, ಸುಬ್ರಹ್ಮಣ್ಯ, ಪುರುಷೋತ್ತಮ, ಎಸ್.ಯೋಗೇಶ, ಪ್ರಭಾಕರ್, ಚಿಕ್ಕಸೋಮಣ್ಣ, ಮಹದೇವಪ್ರಸಾದ್, ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾದ ಫಾರ್ಮಸಿಸ್ಟ್ ಗಳ ಮಕ್ಕಳಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್ ಗಳ ಸಂಘದ ಅಧ್ಯಕ್ಷ ಬಿ.ಎಸ್.ದೇಸಾಯಿ, ಖಜಾಂಚಿ ವೈ.ಎಸ್.ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: