
ಪ್ರಮುಖ ಸುದ್ದಿಮೈಸೂರು
ಶಾಸಕ ಎ.ಟಿ.ರಾಮಸ್ವಾಮಿಯವರ ಸನ್ಮಾನ ಸಮಾರಂಭ .23.
ಮೈಸೂರು,ಡಿ.20 : ಎ.ಟಿ.ರಾಮಸ್ವಾಮಿಯವರ ಅಭಿಮಾನಿಗಳ ಬಳಗದ ವತಿಯಿಂದ ರಾಜಕಾರಣಿ, ಹಿರಿಯ ಹೋರಾಟಗಾರ, ಶಾಸಕ ಎ.ಟಿ.ರಾಮಸ್ವಾಮಿಯವರ ಸನ್ಮಾನ ಸಮಾರಂಭವನ್ನು ನಗರದಲ್ಲಿ ಏರ್ಪಡಿಸಲಾಗಿದೆ.
ಡಿ.23ರ ಬೆಳಗ್ಗೆ 11 ಗಂಟೆಗೆ ಕನ್ನೇಗೌಡನಕೊಪ್ಪಲಿನ ಬಂದಂತಮ್ಮ ಕಾಳಮ್ಮ ಸಮುದಾಯದ ಭವನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಎ.ಎಚ್.ವಿಶ್ವನಾಥ್, ಶಾಸಕ ಕೆ.ಮಹದೇವ್ ಹಾಗೂ ಇನ್ನಿತರ ಜನಪ್ರತಿನಿಧಿಗಳು, ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಳಗದ ಅಧ್ಯಕ್ಷ ಬೋರೇಗೌಡ ತಿಳಿಸಿದರು.
ಪ್ರಧಾನ ಕಾರ್ಯದರ್ಸಿ ಸಿ.ಮಂಜೇಗೌಡ, ಕಾರ್ಯಾಧ್ಯಕ್ಷ ಸಿ.ರಘು, ನಿರ್ಧೇಶಕರಾದ ಕೆ.ರಾಜೇಗೌಡ, ಜಿ.ಪಿ.ರಾಮಸ್ವಾಮಿ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)