ಪ್ರಮುಖ ಸುದ್ದಿಮೈಸೂರು

ಜ.15 : ಟಿ.ಇ.ಟಿ.ಪರೀಕ್ಷೆ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಜ.15 ರಂದು ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಸಂಬಂಧ 26 ಮುಖ‍್ಯ ಅಧೀಕ್ಷಕರು, 26 ಸಾನ್ವಿಕ ಜಾಗೃತ ದಳ ಮತ್ತು 7 ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಆರ್.ಬಸಪ್ಪ ಅವರು ತಿಳಿಸಿದರು.

ಪತ್ರಿಕೆ -1 ಬೆಳಿಗ್ಗೆ 9.30 ರಿಂದ 12 ರವರೆಗೆ, ಪತ್ರಿಕೆ-2 ಮಧ್ಯಾಹ್ನ 2 ರಿಂದ 4.30 ರವರೆಗೆ ನಡೆಯಲಿದೆ. ಪತ್ರಿಕೆ-1 ರಲ್ಲಿ 5214 ಹಾಗೂ ಪತ್ರಿಕೆ-2 ರಲ್ಲಿ 8181 ಅಭ‍್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವುದು. ನೀಲಿ ಅಥವಾ ಕಪ್ಪು ಶಾಯಿ ಬಾಲ್ ಬಾಯಿಂಟ್ ಪೆನ್ನನ್ನು ಮಾತ್ರ ಪರೀಕ್ಷೆಯಲ್ಲಿ ಬಳಸುವಂತೆ ಅವರು ತಿಳಿಸಿದ್ದಾರೆ.

Leave a Reply

comments

Related Articles

error: