ಮೈಸೂರು

ಮಾಗಿ ಆಹಾರ ಮತ್ತು ಕೇಕ್ ಉತ್ಸವಕ್ಕೆ ಡಿ. 22 ರೊಳಗೆ ನೋಂದಣಿ

ಮೈಸೂರು ಡಿ.21:-  ಮೈಸೂರು ಮಾಗಿ ಉತ್ಸವದ ಅಂಗವಾಗಿ ‘’ ಮೈಸೂರು ಮಾಗಿ ಆಹಾರ ಮತ್ತು ಕೇಕ್ ಉತ್ಸವ 2018 ನಡೆಸಲು ಉದ್ದೇಶಿಸಿದೆ.
ಈ ಉತ್ಸವದಲ್ಲಿ ಕೇಕ್, ಐಸ್‍ಕ್ರೀಂ, ಚಾಟ್ಸ್, ತಂಪುಪಾನೀಯಗಳ ಮಾರಾಟಗಾರರು ಭಾಗವಹಿಸಬಹುದು. ಭಾಗವಹಿಸಲು ಇಚ್ಛಿಸುವವರು 22.12.2018 ರ ಮಧ್ಯಾಹ್ನ 3 ಗಂಟೆಯೊಳಗೆ ಜಂಟಿ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಮೈಸೂರು ನೋಂದಾಯಿಸಿಕೊಳ್ಳಬೇಕು.

ಈ ಬಗ್ಗೆ ಚರ್ಚಿಸಲು 22-12-2018 ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಸಭೆ ಕರೆಯಲಾಗಿದೆ. ಉತ್ಸವದಲ್ಲಿ ಭಾಗವಹಿಸಲು ಇಚ್ಛಿಸುವ ಹೋಟೆಲ್‍ಗಳು/ ಬೇಕರಿಯವರು / ಟ್ರಾವೆಲ್ ಏಜೆನ್ಸಿಗಳು / ಉದ್ದಿಮೆದಾರರು ಮತ್ತು ಪ್ರಾಯೋಜಕರು ಈ ಸಭೆಯಲ್ಲಿ  ಭಾಗವಹಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಅವರು ಮನವಿ ಮಾಡಿದ್ದಾರೆ.
ಕೇಕ್ ಉತ್ಸವವನ್ನು ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ, ಉದಯ ರವಿ ರಸ್ತೆ, ಕುವೆಂಪುನಗರ, ಮೈಸೂರು ಇಲ್ಲಿ 26.12.2018 ರಿಂದ 28.12.2018 ರವರೆಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: