
ಪ್ರಮುಖ ಸುದ್ದಿ
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕರಾಗಿ ಕುಂಞ ಅಬ್ದುಲ್ಲಾ ಆಯ್ಕೆ
ರಾಜ್ಯ(ಮಡಿಕೇರಿ) ಡಿ.21 : – ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕರಾಗಿ ವಕೀಲರಾದ ಕುಂಞ ಅಬ್ದುಲ್ಲಾ, ಸಹ ಸಂಚಾಲಕರಾಗಿ ಬಿ.ಎಂ.ಸುರೇಶ್ ಹಾಗೂ ಕರಿಕೆಯ ರಮಾನಾಥ್ ಅವರು ಆಯ್ಕೆಯಾಗಿದ್ದಾರೆ.
ಗೌರವ ಸಂಚಾಲಕರಾಗಿ ವಕೀಲ ವಿದ್ಯಾಧರ್, ಸದಸ್ಯರಾಗಿ ಜನಾರ್ಧನ್, ರಜಾóಕ್, ಪೂವಯ್ಯ, ಬಶೀರ್, ನೆರವಂಡ ಉಮೇಶ್, ಸೋಮವಾರಪೇಟೆ ತಾಲೂಕು ಸಂಚಾಲಕರಾಗಿ ವಕೀಲ ಚಂದನ್ ಹಾಗೂ ಜಯರಾಮ್, ಮಡಿಕೇರಿ ತಾಲೂಕು ಸಂಚಾಲಕರಾಗಿ ಆವಂದೂರಿನ ಗಿರೀಶ್, ವಿರಾಜಪೇಟೆ ಸಂಚಾಲಕರಾಗಿ ವಕೀಲ ಕೆ.ಪಿ.ಸುನೀಲ್ ಹಾಗೂ ವೇದಿಕೆಯ ಮಾರ್ಗದರ್ಶಕರಾಗಿ ಕೆ.ಕೆ.ಮಂಜುನಾಥ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಬುದ್ಧ, ಬಸವೇಶ್ವರ, ಅಂಬೇಡ್ಕರ್, ಕುವೆಂಪು, ನಾರಾಯಣ ಗುರು, ವಿವೇಕಾನಂದ ಮುಂತಾದ ದಾರ್ಶನಿಕ, ರಾಷ್ಟ್ರೀಯ ನಾಯಕರನ್ನು ಮಾದರಿಯಾಗಿಸಿಕೊಂಡು ದೇಶದಲ್ಲಿ ನಡೆಯುತ್ತಿರುವ ಹಿಂಸೆ, ಅರಾಜಕತೆ, ಅನ್ಯಾಯ, ಅಸಮಾನತೆಗಳಿಗೆ ಉತ್ತರವಾಗಿ ಯುವ ಜನತೆಯನ್ನು ಮಾನವೀಯತೆಯ ಕಡೆಗೆ ಕೊಂಡೊಯ್ಯುವ ಕಾರ್ಯವನ್ನು ಮಾನವ ಬಂಧುತ್ವ ವೇದಿಕೆ ಮಾಡಲಿದೆ. ಮದ್ಯ ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ವೇದಿಕೆಯ ಗುರಿಯಾಗಿದೆ ಎಂದು ನೂತನ ಜಿಲ್ಲಾ ಪ್ರಧಾನ ಸಂಚಾಲಕ ಕುಂಞ ಅಬ್ದುಲ್ಲಾ ತಿಳಿಸಿದರು.
ಕುಶಾಲನಗರದ ಹಳ್ಳಿಮನೆ ಸಭಾಂಗಣದಲ್ಲಿ ವಲಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. (ಕೆಸಿಐ,ಎಸ್.ಎಚ್)