ಮೈಸೂರು

ಕೊನೆಗೂ ಕಾರ್ಯಾಲಯ ತೆರೆಯಲು ಮುಂದಾದ ಸಚಿವ ಜಿ.ಟಿ.ದೇವೇಗೌಡ : ಇನ್ನು ಮುಂದೆ ನೂತನ ಕಟ್ಟಡದಲ್ಲಿ ಅಹವಾಲು ಸ್ವೀಕಾರ

ಮೈಸೂರು,ಡಿ.21:- ಜಲದರ್ಶಿನಿಯ ಆವರಣದಲ್ಲಿ ನಿರ್ಮಾಣವಾಗಿರುವ ಅತಿಗಣ್ಯರ ಅತಿಥಿಗೃಹದ ನೂತನ ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು, ಈ ಕಟ್ಟಡದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಕಾರ್ಯಾಲಯವೂ ಕೂಡ ಓಪನ್ ಆಗಲಿದೆ ಎನ್ನಲಾಗಿದೆ.

ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ನೂತನ ಗೆಸ್ಟ್ ಹೌಸ್ ನ್ನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೇ ಉದ್ಘಾಟಿಸಿದ್ದರು. ಸುಮಾರು ಎಂಟು ಕೋಟಿ ರೂ. ವೆಚ್ಚದಲ್ಲಿ  ನಿರ್ಮಾಣವಾಗಿರುವ ಈ ವೈಟ್ ಬಿಲ್ಡಿಂಗ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯವೂ ಕೂಡ ಓಪನ್ ಆಗಲಿದೆ. ಇನ್ನು ಮುಂದೆ ಜನರ ಅಹವಾಲುಗಳನ್ನು ಸಚಿವ ಜಿ.ಟಿ.ದೇವೇಗೌಡ ಅವರು ಈ ಕಛೇರಿಯಲ್ಲೇ ಸ್ವೀಕರಿಸಲಿದ್ದಾರೆ. ಕೊನೆಗೂ ಕಛೇರಿ ಮಾಡಲು ಸಚಿವ ಜಿ.ಟಿ ದೇವೇಗೌಡ ಅವರು ಮುಂದಾಗಿದ್ದಾರೆ. ಜಿಲ್ಲಾ ಮಂತ್ರಿ ಆಗಿದ್ದರೂ, ಕಛೇರಿ ತೆರೆಯದೇ ಇರುವ ಮಂತ್ರಿ ಎಂಬ ಆರೋಪಕ್ಕೆ ಗುರಿಯಾಗಿದ್ದರು. ಇದೀಗ ಇಲ್ಲಿಯೇ ಜನರ ಅಹವಾಲು, ಸಮಸ್ಯೆ, ಮತ್ತು ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ ಎನ್ನಲಾಗಿದೆ.

ಇದೇ ಕಟ್ಟಡದಲ್ಲಿ ನಾಲ್ಕು ರೂಂಗಳನ್ನು ಪಡೆದುಕೊಂಡಿದ್ದಾರೆ. ಕೆಳ ಅಂತಸ್ತಿನ ನಾಲ್ಕು ರೂಂಗಳ ಪೈಕಿ ಸಚಿವರಿಗೆ ಛೇಂಬರ್, ಮೀಟಿಂಗ್ ಹಾಲ್, ಮತ್ತು ಬಂದ ಜನರಿಗೆ ಕುಳಿತುಕೊಳ್ಳುವುದಕ್ಕೆ ಎರಡು ರೂಂ ಪಡೆದಿದ್ದಾರೆ. ಜನವರಿ ಮೊದಲನೇ ವಾರದಲ್ಲಿ ಕೊಠಡಿಗಳ ಉದ್ಘಾಟನೆಯನ್ನು ಸಚಿವರು ನೆರವೇರಿಸಲಿದ್ದಾರೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: