
ಮೈಸೂರು
ಹನುಮ ಜಯಂತಿ ಆಚರಣೆ : ಮದ್ಯ ಮಾರಾಟಕ್ಕೆ ನಿಷೇಧ ಹೊರಡಿಸಿದ ಎಸ್ಪಿಅಮಿತ್ ಸಿಂಗ್
ಮೈಸೂರು,ಡಿ.21:- ನಾಳೆ(ಡಿ.22)ಹುಣಸೂರು ಪಟ್ಟಣದಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಹನುಮ ಜಯಂತಿ ಆಚರಣೆ ಮಾಡಲಿದ್ದು, ಜಯಂತಿ ಆಚರಣೆ ಸಂಬಂಧ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಹುಣಸೂರು ಪಟ್ಟಣವು ಅತೀ ಸೂಕ್ಷ್ಮ ಪ್ರದೇಶವಾಗಿದ್ದು ಹನುಮ ಜಯಂತಿ ಆಚರಣೆ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಹುಣಸೂರು ಪಟ್ಟಣದ 5ಕಿ.ಮೀ ವ್ಯಾಪ್ತಿಯಲ್ಲಿ ಇಂದು ಸಂಜೆ 6ಗಂಟೆಯಿಂದ ಡಿ.22ರ ರಾತ್ರಿ 12ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)