
ಪ್ರಮುಖ ಸುದ್ದಿ
ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಜೊತೆ ವಾಹನ ವಶ
ರಾಜ್ಯ(ಮಂಡ್ಯ)ಡಿ.21:- ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ವೃತ್ತದ ಬಳಿ ಬೆಳಗಿನ ಜಾವ 5-45 ರ ಸಮಯದಲ್ಲಿ ಪೋಲೀಸರು ಗಸ್ತು ತಿರುಗುತ್ತಿದ್ದ ವೇಳೆ ಟಾಟಾ ಏಸ್ ವಾಹನದ ಸಂಖ್ಯೆಯ (KA-02 AF 7034)ಚಾಲಕನೊಬ್ಬ ಪೋಲೀಸರನ್ನು ನೋಡಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಪರೀಶೀಲಿಸಿದಾಗ ಅಕ್ಕಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಅನುಮಾನ ಬಂದು ಪರಿಶೀಲಿಸಿದ ಪೊಲೀಸರು ವಾಹನದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನ ಭಾಗ್ಯದ ಅಕ್ಕಿಯ ಮೂಟೆಗಳಿರುವುದನ್ನು ಕಂಡು ವಾಹನವನ್ನು ಪೊಲೀಸ್ ಠಾಣೆಗೆ ತಂದು ಮಹಜರು ಮಾಡಿ ಸುಮಾರು ಒಂದೂವರೆ ಕ್ವಿಂಟಾಲ್ ಗೂ ಅಧಿಕ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ. ದಾಳಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್, ಸಿಬ್ಬಂದಿ ಗಳಾದ ಚಿರಂಜೀವಿ, ಪ್ರೀತಿ ಕುಮಾರ್ ಹಾಜರಿದ್ದರು. (ಕೆ.ಎಸ್,ಎಸ್.ಎಚ್)