ಮೈಸೂರು

ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ : ಪ್ರತಿಭಟನೆ

ಮೈಸೂರು ಜಿಲ್ಲೆ, ತಾಲೂಕಿನ ಗ್ರಾಮಪಂಚಾಯತ್ ಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಡಾ.ಬಿ.ಆರ್. ಅಂಬೇಡ್ಕರ್ ಆದಿ ದ್ರಾವಿಡ ಯುವಕರ ಅಭಿವೃದ್ಧಿ ಮಹಾಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಗ್ರಾಮಪಂಚಾಯತ್ ಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಇಲಾಖೆಯು ನಿಗದಿಗೊಳಿಸಿರುವಂತೆ ಕನಿಷ್ಠ ವೇತನ ನೀಡದೇ ವಂಚನೆ ಮಾಡುತ್ತಿದ್ದು, ಆಗಸ್ಟ್ 4ರ ಸರ್ಕಾರದ ಆದೇಶದಂತೆ ಪರಿಷ್ಕರಣೆ ವೇತನ ನೀಡಬೇಕು. 30-40 ವರ್ಷಗಳಿಂದ ಸೇವೆ ಸಲ್ಲಿಸುವ ಪೌರಕಾರ್ಮಿಕರಿಗೆ ನಿವೃತ್ತಿ ವೇತನ ಅಥವಾ ಮರಣ ಹೊಂದಿದರೆ ಸರ್ಕಾರದ ನಿಯಮದಂತೆ 16ತಿಂಗಳ ವೇತನ ಉಪದಾನ ನೀಡಬೇಕು. ವಾಸಿಸಲು ಸರಿಯಾದ ಸೂರಿಲ್ಲದ ಕಾರಣ ನಿವೇಶನ ಅಥವಾ ಮನೆ ಮಂಜೂರು ಮಾಡಬೇಕು. ತಾಲೂಕುಗಳಲ್ಲಿರುವ ಗ್ರಾಮಪಂಚಾಯತ್ ಗಳಲ್ಲಿ ಪೌರಕಾರ್ಮಿಕರುಗಳಿಗೆ ನೀಡುವ ವೇತನ ತಾರತಮ್ಯವನ್ನು ಸರಿ ಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಸಿ.ಎಂ.ರಾಮ್ಯಯ, ರಾಜ್ಯಾಧ್ಯಕ್ಷ ಆರ್.ಶಿವಣ್ಣ, ಗೌರವಸಲಹೆಗಾರ ಸಣ್ಣಬೋರ, ಡಿ.ಆರ್.ರಾಜು ಸೇರಿದಂತೆ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು.

Leave a Reply

comments

Related Articles

error: