ಮೈಸೂರು

ನೂತನ ಪೊಲೀಸ್ ಗಸ್ತು ವಾಹನಗಳಿಗೆ ಚಾಲನೆ : ರಸ್ತೆ ಸುರಕ್ಷಾ ಸಪ್ತಾಹಕ್ಕೆ ಸಚಿವರ ಪ್ರಶಂಸೆ

28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ 2017 ಹಾಗೂ ಅಪರಾಧ ತಡೆ ಮಾಸಾಚರಣೆ 2016-17ರ ಉದ್ಘಾಟನೆ ಮತ್ತು 25ನೂತನ ಪೊಲೀಸ್ ಗಸ್ತು ವಾಹನಗಳಿಗೆ  ಸೋಮವಾರ ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಚಾಲನೆ ನೀಡಲಾಯಿತು.

ಅಪರಾಧ ತಡೆ ಮಾಸಾಚರಣೆಯನ್ನು ದೀಪ ಬೆಳಗುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಾರ್ವಜನಿಕರ ಪ್ರಾಣ ರಕ್ಷಣೆಗೆ ಪೊಲೀಸ್ ಇಲಾಖೆ ಮತ್ತು ಇತರ ಇಲಾಖೆಗಳು ಕೈಜೋಡಿಸಿ ರಸ್ತೆ ಸುರಕ್ಷಾ ಸಪ್ತಾಹವನ್ನು ಮಾಡುತ್ತಿರುವುದು ನಿಜpolice-2ಕ್ಕೂ ಪ್ರಶಂಸನೀಯ ಎಂದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹವನ್ನು ಜಾರಿಗೆ ತಂದಿದ್ದು, ರಾಜ್ಯ ಸರ್ಕಾರಗಳೂ ಇದನ್ನು ಅನುಸರಿಸಿಕೊಂಡು ಬಂದಿವೆ. ಮೈಸೂರು ನಗರ ಪೊಲೀಸರು ಇದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯಿದ್ದರೂ ಸಹ ಇರುವ ಸಿಬ್ಬಂದಿಗಳೇ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಕಾನೂನಿನ ಅರಿವು ಕುರಿತು ಕೈಗೊಂಡಿರುವ ಈ ಕಾರ್ಯಕ್ರಮದಿಂದ ಅಪಘಾತಗಳು ಕಡಿಮೆಯಾಗುತ್ತಿವೆ ಎಂದು ತಿಳಿಸಿದರು.

ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯುವುದೇ ಇದರ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರಲ್ಲದೇ, ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯ ಷಟ್ಪಥ(6ಪಥ) ಟೆಂಡರ್ ಡಿಸೆಂಬರ್ ನಲ್ಲಿಯೇ ಕರೆಯಬೇಕಿತ್ತು. ಆದರೆ ಜನವರಿ 16ಕ್ಕೆ ಕರೆಯಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭ 25 ಪೊಲೀಸ್ ಗಸ್ತುವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿಗಳು ಜಾಥಾ ನಡೆಸಿದರು. ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಜಾಥಾ ಕ್ಲಾಕ್ ಟವರ್, ಕೆ.ಟಿ.ಸ್ಟ್ರೀಟ್ ಅಶೋಖ ವೃತ್ತದ ಮೂಲಕ ಸಾಗಿ ಮತ್ತೆ ದೇವಸ್ಥಾನವನ್ನು ತಲುಪಿತು.

ಈ ಸಂದರ್ಭ ಮಹಾನಗರಪಾಲಿಕೆಯ ಮೇಯರ್, ಎಂ.ಜೆ.ರವಿಕುಮಾರ್, ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: