ಸುದ್ದಿ ಸಂಕ್ಷಿಪ್ತ
ಡಿ.23 ರಂದು ಮಾಹಿತಿ ಕಾರ್ಯಾಗಾರ
ಮೈಸೂರು,ಡಿ.21-ಎಂಟರ್ ಪ್ರೈನರ್ ಕೇರ್ ಫೋರಂ ವತಿಯಿಂದ ಡಿ.23 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಟಿ.ಕೆ.ಬಡಾವಣೆಯ ಬಿಎಸ್ಎನ್ಎಲ್ ತರಬೇತಿ ಕೇಂದ್ರದಲ್ಲಿ ಸೋಲಾರ್ ತಂತ್ರಜ್ಞಾನ ಹಾಗೂ ಉದ್ಯಮಶೀಲತೆ-ಅವಕಾಶಗಳು ಹಾಗೂ ಸವಾಲುಗಳ ಕುರಿತು ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ.
ಕಾರ್ಯಾಗಾರವನ್ನು ಎನ್ಐಇ ಸಿಆರ್ ಇಸಿಟಿ ಮುಖ್ಯಸ್ಥ ಶ್ಯಾಮ ಸುಂದರ್, ಕರ್ನಾಟಕ ಸರ್ಕಾರದ ಕೆಆರ್ ಇಡಿಎಲ್ ಯೋಜನಾ ಅಭಿಯಂತರ ದಿನೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಉದ್ಯಮಿ ಹಾಗೂ ಇಂಧನ ತಜ್ಞ ಅನಿಲ್ ಕುಮಾರ್ ಅವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸುವವರು 250 ರೂ. ಶುಲ್ಕ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9449837309, 9901458996 ಸಂಪರ್ಕಿಸಬಹುದು. (ಎಂ.ಎನ್)