ಸುದ್ದಿ ಸಂಕ್ಷಿಪ್ತ

ಲೇಖನ, ಕವನ ಸ್ಪರ್ಧೆ

ಮೈಸೂರು,ಡಿ.21-ಎಫ್ ಎಂ 100.6 ಮೈಸೂರು ಆಕಾಶವಾಣಿಯ ಕೇಳುಗ ಬಳಗ ಸಮುದ್ಯತಾ ಶ್ರೋತೃ ಸಂಘದ 10ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ಲೇಖನ ಹಾಗೂ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಮೂಹ ಮಾಧ್ಯಮಗಳಲ್ಲಿ ಆಕಾಶವಾಣಿಯ ಪಾತ್ರ ಎಂಬ ವಿಷಯವಾಗಿ ಲೇಖನವನ್ನು 600 ಪದಗಳ ಮಿತಿಯಲ್ಲಿ ಹಾಗೂ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಕವನವನ್ನು 20 ಸಾಲುಗಳು ಮೀರದಂತೆ ಬರೆದು ಕಳುಹಿಸಬಹುದಾಗಿದೆ.

ಆಯ್ಕೆಯಾದ ಲೇಖನ, ಕವನಗಳಿಗೆ ನಗದು ಪುರಸ್ಕಾರದ ಜತೆಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಲೇಖನ, ಕವನವನ್ನು ಜನವರಿ 10 ರೊಳಗೆ ಟಿ.ಎನ್.ರಾಜೇಶ್ವರಿ, ಕಾರ್ಯದರ್ಶಿ, ಸಮುದ್ಯತಾ ಶ್ರೋತೃ ಸಂಘ, ನಂ.511, 2ನೇ ಕ್ರಾಸ್, 2ನೇ ಹಂತ, ಗಾಯಿತ್ರಿಪುರಂ, ಮೈಸೂರು-570019 ಗೆ ಕಳುಹಿಸಬಹುದು. ಹೆಚ್ಚಿನ ಮಾಹಿಗಿಗಾಗಿ ಮೊ.ಸಂ. 8105655646, 8123538007 ಅನ್ನು ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: